×
Ad

ಚೀನಾ: ಬಸ್‌ಗೆ ಬೆಂಕಿ, 14 ಬಲಿ, 32 ಮಂದಿಗೆ ಗಾಯ

Update: 2016-01-06 00:29 IST

ಬೀಜಿಂಗ್, ಜ.5: ಉತ್ತರ ಚೀನಾದಲ್ಲಿ ಮಂಗಳವಾರ ಮುಂಜಾನೆ ಪ್ರಯಾಣಿಕ ಬಸ್ಸೊಂದು ಬೆಂಕಿಗಾಹುತಿಯಾದ ಪರಿಣಾಮ ಅದರಲ್ಲಿದ್ದ 14 ಮಂದಿ ಅಸುನೀಗಿದ್ದು, ಇತರ 32 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
 ಇದೊಂದು ಭಯೋತ್ಪಾದಕ ದಾಳಿಯಾಗಿರಬೇಕೆಂದು ಶಂಕಿಸಲಾಗಿದ್ದು, ಶಂಕಿತನಿಗಾಗಿ ನಿಂಗ್‌ಕ್ಸಿಯಾ ಪ್ರಾದೇಶಿಕ ಭದ್ರತಾ ಇಲಾಖೆಯು ಶೋಧಕಾರ್ಯ ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಸ್ಥಳೀಯ ಕಾಲಮಾನ ಮಂಗಳ ವಾರ ಮುಂಜಾನೆ 7 ಗಂಟೆಯ ಸುಮಾರಿಗೆ ನಿಂಗ್‌ಕ್ಸಿಯಾ ಸ್ವಾಯತ್ತ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರಕಾರಿ ಸ್ವಾಮ್ಯದ ಯಿನ್‌ಚುವಾನ್ ಸಾರ್ವಜನಿಕ ಸಾರಿಗೆ ಕಂಪೆನಿಗೆ ಸೇರಿದ ಬಸ್ ಯಿನ್‌ಚುವಾನ್ ರೈಲು ನಿಲ್ದಾಣದ ಕಡೆಗೆ ಚಲಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News