ಗ್ರೀನ್‍ಕಾರ್ಡ್ ಲಾಟರಿ ವ್ಯವಸ್ಥೆ ಸ್ಥಗಿತ: ಟ್ರಂಪ್ ಘೋಷಣೆ
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ಡಿ.19: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ ಅಮೆರಿಕಾದಲ್ಲಿ ಗ್ರೀನ್‍ಕಾರ್ಡ್ ಲಾಟರಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಪೌರತ್ವ ಮತ್ತು ವಲಸೆ ಸೇವೆಗೆ ಸೂಚಿಸಿರುವುದಾಗಿ ಆಂತರಿಕ ಭದ್ರತಾ ಕಾರ್ಯದರ್ಶಿ ಕ್ರಿಸ್ತಿ ನೊಯೆಮ್ ಸಾಮಾಜಿಕ ಮಾಧ್ಯಮ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬ್ರೌನ್ ವಿವಿಯಲ್ಲಿ ಇತ್ತೀಚೆಗೆ ನಡೆದಿದ್ದ ಮಾರಣಾಂತಿಕ ಗುಂಡಿನ ದಾಳಿ ಘಟನೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಘಟನೆಯ ಶಂಕಿತ ಆರೋಪಿಯನ್ನು 48 ವರ್ಷದ ಪೋರ್ಚುಗಲ್ ಪ್ರಜೆ ಕ್ಲಾಡಿಯೊ ವ್ಯಲೆಂಟ್ ಎಂದು ಗುರುತಿಸಲಾಗಿದೆ. ಶಂಕಿತ ಆರೋಪಿ ` ಡೈವರ್ಸಿಟಿ ಲಾಟರಿ ಇಮಿಗ್ರೆಂಟ್ ವೀಸಾ ಪ್ರೋಗ್ರಾಂ'ನಡಿ ಅಮೆರಿಕ ಪ್ರವೇಶಿಸಿದ ಬಳಿಕ ಗ್ರೀನ್ ಕಾರ್ಡ್ ಪಡೆದಿದ್ದ. ಈ ಪ್ರಕ್ರಿಯೆಯನ್ನು 2017ರಲ್ಲೇ ಕೊನೆಗೊಳಿಸಲು ಅಧ್ಯಕ್ಷ ಟ್ರಂಪ್ ಪ್ರಯತ್ನಿಸಿದ್ದರು. ಒಂದು ವೇಳೆ ಆಗಲೇ ರದ್ದಾಗಿದ್ದರೆ ಇಂತಹ ಕೃತ್ಯಕ್ಕೆ ಆಸ್ಪದ ಇರುತ್ತಿರಲಿಲ್ಲ' ಎಂದು ಕ್ರಿಸ್ತಿ ನೊಯೆಮ್ ಹೇಳಿದ್ದಾರೆ.