ಶೀಘ್ರ ಇ-ಹೆಲ್ತ್ ಸಾಫ್ಟ್‌ವೇರ್ ಬಿಡುಗಡೆ: ಸಚಿವ ಖಾದರ್; ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ
ಉಳ್ಳಾಲ. ಜ, 6: ತಂತ್ರಜ್ಞ್ಞಾನದಲ್ಲಿ ನಾವು ಮುಂದಿದ್ದು ಶೀಘ್ರದಲ್ಲೇ ಇ-ಹೆಲ್ತ್ ಎಂಬ ಸಾಪ್ಟ್‌ವೇರ್‌ನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇ-ಹೆಲ್ತ್ ಎಂಬ ಸಾಪ್ಟ್‌ವೇರ್‌ನಲ್ಲಿ ವ್ಯಕ್ತಿಯ ದೇಹದ ತೂಕ, ಗಾತ್ರ, ರಕ್ತ ಗುಂಪು ಇಂತಹ ಮಾಹಿತಿ ಸಂಗ್ರಹಿಸಿದಾಗ ವೈದ್ಯರಿಗೆ ಚಿಕಿತ್ಸೆ ಮಾಡಲು ಸಹಕಾರಿಯಾಗಲಿದೆ. ಆರೋಗ್ಯ ಕೆಂದ್ರದಲ್ಲಿ ಕ್ಷಕಿರಣ, ಹೊರ ರೋಗಿಗಳ ವಿಭಾಗ, ಡಯಾಲಿಸಿಸ್, ಸ್ಪೀಚ್ ಥೆರಪಿ ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಅಲ್ಲದೆ ಮೊದಲ ಹಂತದಲ್ಲಿ 30 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಮದನಿ ಕೂರತ್ ಶಿಲಾನ್ಯಾಸಗೈದರು. ಉಳ್ಳಾಲ ನಗರಸಭೆಯ ಉಪಾಧ್ಯಕ್ಷೆ ರಝಿಯಾ ಇಬ್ರಾಹೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್. ಹಂಝ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಉಳ್ಳಾಲ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕರ ಕಿಣಿ, ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತ ಧರ್ಮ ಅರಸರ ಕ್ಷೇತ್ರದ ಲಕ್ಷ್ಮಣ ಉಳ್ಳಾಲ ಹೊಗೆ, ರವೀಂದ್ರರಾಜ್, ಉಳ್ಳಾಲ ವೀರಭದ್ರ ಕ್ಷೇತ್ರದ ಅಧ್ಯಕ್ಷ ಐತಪ್ಪಶೆಟ್ಟಿಗಾರ್, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಕೋಟೆಪುರ ಜುಮಾ ಮಸೀದಿಯ ಅಧ್ಯಕ್ಷ ಬಾವಾ ಇಸ್ಮಾಯೀಲ್, ಉಳ್ಳಾಲ ನಗರಸಭೆಯ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಉಳ್ಳಾಲ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಹಮ್ಮದ್ ಮುಕ್ಕಚ್ಚೇರಿ, ಉಳ್ಳಾಲ ಪೇಟೆ ರಹ್ಮಾನಿಯಾ ಮಸೀದಿಯ ಅಧ್ಯಕ್ಷ ಮೊಯ್ದಿನ್ ಹಸನ್, ದರ್ಗಾ ಸಮಿತಿ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಸದಸ್ಯ ಬುಖಾರಿ ಕಲ್ಲಾಪು, ಉಳ್ಳಾಲ ಸಮ್ಮರ್‌ಸ್ಯಾಂಡ್‌ನ ಮಾಲಕ ಅಲೋಶಿಯಸ್ ಅಲ್ಬುಕರ್ಕ್, ನಗರ ಸಭೆಯ ಸದಸ್ಯರಾದ ಪೊಡಿಮೋನು ಇಸ್ಮಾಯೀಲ್, ಸುಕುಮಾರ್, ಹನೀಫ್ ಕೋಟೆಪುರ, ಸುಂದರ ಉಳಿಯ, ಪತ್ಹಾಕ್, ಅಶ್ರಫ್ ಕೋಡಿ, ಫಾರೂಕ್ ಉಳ್ಳಾಲ, ಯು.ಕೆ. ಯೂಸುಫ್, ಯು.ಕೆ. ಮುಸ್ತಪಾ, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಆಡಳಿತಾಧಿಕಾರಿ ಡಾ. ಗೋಪಿಪ್ರಕಾಶ್, ಡಾ. ರಾಜೇಶ್, ಡಾ. ರತ್ನಾಕರ್, ಡಿಎಂಒ ಡಾ. ಅರುಣ್ ಕುಮಾರ್, ನಗರಸಭೆೆಯ ಕಿರಿಯ ಅಭಿಯಂತರರಾದ ರೇಣುಕಾ ಹಾಗೂ ದಿವಾಕರ್, ಎಇಇ ಎಂ. ರಘುಚಂದ್ರ ಹೆಬ್ಬಾರ್, ಸಹಾಯಕ ಎಂಜಿನಿಯರ್ ಆಶೋಕ್ ಕುಮಾರ್, ಗುತ್ತಿಗೆದಾರ ಕೃಷ್ಣೇಗೌಡ, ಜನಾರ್ದನ ಬಾಬು ಉಪಸ್ಥಿತರಿದ್ದರು.
ಕೌನ್ಸಿಲರ್ ಮುಸ್ತಫಾ ಅಬ್ದುಲ್ಲ ಸ್ವಾಗತಿಸಿದರು. ಕೌನ್ಸಿಲರ್ ಯು.ಎ. ಇಸ್ಮಾಯೀಲ್ ಕಾರ್ಯಕ್ರಮ ನಿರೂಪಿಸಿದರು. ಅಹ್ಮದ್ ಬಾವಾ ಕೊಟ್ಟಾರ ವಂದಿಸಿದರು.