ಎವ್ಲಿನ್ ಡಿಸಿಲ್ವರಿಗೆ ‘ಕರಾವಳಿ ಕೊಂಕಣ್ ಕಲಾ ಪ್ರಶಸ್ತಿ’
ವುಂಗಳೂರು, ಜ.6: ಕರಾವಳಿ ಕೊಂಕ್ಸ್ ಸಂಘಟನೆಯ ವತಿಯಿಂದ ನೀಡುವ 2015ನೆ ಸಾಲಿನ ಕರಾವಳಿ ಕೊಂಕಣ್ ಕಲಾ ಪ್ರಶಸ್ತಿಯನ್ನು ಕೊಂಕಣಿ ನಾಟಕ ಕ್ಷೇತ್ರದ ಹಿರಿಯ ರಂಗ ಕಲಾವಿದೆ ಎವ್ಲಿನ್ ಮಾರಿ ಡಿಸಿಲ್ವಾಗೆ ನೀಡ ಲಾಗುವುದು ಎಂದು ಸಂಘದ ಅಧ್ಯಕ್ಷ ಲೆಸ್ಲಿ ರೇಗೊ ತಿಳಿಸಿದ್ದಾರೆ.
ಕೊಂಕಣಿ ನಾಟಕ ಕ್ಷೇತ್ರದಲ್ಲಿ ದುಡಿದ ಕಲಾವಿದರನ್ನು ಗೌರವಿಸುವ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜ.9 ರಂದು ಬೆಂದೂರು ಸಂತ ಸೆಬಾಸ್ಟಿಯನ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿಯು 50,000 ರೂ., ಶಾಲು, ಸ್ಮರಣಿಕೆ, ಸನ್ಮಾನಪತ್ರವನ್ನು ಒಳಗೊಂಡಿದೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿಂದು ವಿವರಿಸಿದರು. ಎವ್ಲಿನ್ ಮಾರಿ ಡಿಸಿಲ್ವ ಕೊಂಕಣಿ ನಾಟಕ ಕ್ಷೇತ್ರದಲ್ಲಿ 50 ವರ್ಷಗಳಿಗಿಂತಲೂ ಹೆಚ್ಚು ಕಾಲ ತೊಡಗಿಸಿಕೊಂಡಿ ದ್ದಾರೆ. 50 ವರ್ಷಗಳ ಹಿಂದೆ ನಾಟಕ ಗಳಲ್ಲಿ ಸೀ ಪಾತ್ರವನ್ನು ಪುರುಷರೇ ನಟಿಸುವಂತಹ ಕಾಲದಲ್ಲಿ ಸೀ ಪಾತ್ರದಲ್ಲಿ ನಟಿಸಿ, ಕೊಂಕಣಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಸೀಯರಲ್ಲಿ ಎವ್ಲಿನ್ ಡಿಸಿಲ್ವಾ ಒಬ್ಬರು. ಆಮ್ಚೆಂ ದಾಯ್ಜೆ, ಆಂಕ್ವಾರ್ ಆವಯ್, ಮಾವ್ಶಿ, ಬಂದಿವಾನ್, ಕ್ರಿಸ್ತಾಚೆಂ ಜನನ್, ಸೊಮ್ಯಾಚೊ ಪಾಶಾಂವ್, ಸರ್ದಾರಾಚಿ ಸಿನೊಲ್ ಸೇರಿದಂತೆ ವಿವಿಧ ನಾಟಕಗಳಲ್ಲಿ ನಟಿಸಿದ್ದಾರೆ ಎಂದು ಅವರು ತಿಳಿಸಿದರು. ಾರ್ಯದರ್ಶಿ ಕ್ಲೊಡ್ ಡಿಸೋಜ, ಕೊೀಶಾಧಿಕಾರಿ ಸೈಮನ್ ಪಿಂಟೊ, ಸದಸ್ಯ ಅನಿಲ್ ಸಲ್ಡಾನ ಉಪಸ್ಥಿತರಿದ್ದರು.