ಪಾಂಡೇಶ್ವರ ಪೊಲೀಸ್ ವಶದಲ್ಲಿ ಬನ್ನಂಜೆ ರಾಜಾ
Update: 2016-01-07 00:15 IST
ಮಂಗಳೂರು, ಜ.6: ಕುಖ್ಯಾತ ಪಾತಕಿ ಬನ್ನಂಜೆ ರಾಜಾನನ್ನು ಎರಡು ದಿನಗಳ ಕಾಲ ಪಾಂಡೇಶ್ವರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಐದು ದಿನಗಳ ಹಿಂದೆ ಕದ್ರಿ ಪೊಲೀಸರ ವಶದಲ್ಲಿದ್ದ ರಾಜಾನನ್ನು ಇಂದು ನ್ಯಾಯಾಲ ಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪಾಂಡೇಶ್ವರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದನ್ನು ಪುರಸ್ಕರಿಸಿದ ನ್ಯಾಯಾಲಯ ಆತನನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಿದೆ.
2002ರಲ್ಲಿ ಮಾನವ ಹಕ್ಕುಗಳ ಹೋರಾ ಟಗಾರ, ಪಿಯುಸಿಎಲ್‌ನ ಪಿ.ಬಿ. ಡೇಸಾ ಮೇಲೆ ನಡೆದ ಹಲ್ಲೆ ಮತ್ತು ದಾಳಿಗೆ ಸಂಬಂ ಧಿಸಿ ಬನ್ನಂಜೆ ರಾಜಾ ಆಪಾದಿತನಾಗಿದ್ದಾನೆ.