ಉಡುಪಿ: ಜೇನು ಕೃಷಿ ತರಬೇತಿ ಉದ್ಘಾಟನೆ
ಉಡುಪಿ, ಜ.6: ತೋಟಗಾರಿಕಾ ಇಲಾ ಖೆಯ ದೊಡ್ಡಣಗುಡ್ಡೆ ತರಬೇತಿ ಕೇಂದ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ಜೇನು ಕೃಷಿ ತರಬೇತಿಯನ್ನು ಉಡುಪಿ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಉದ್ಘಾಟಿಸಿದರು.
ಜೇನು ಕೃಷಿಯು ಕೃಷಿ ಚಟುವಟಿಕೆ ಗಳೊಂದಿಗೆ ನಡೆಸುವ ಉಪಕಸುಬಾಗಿದ್ದು, ಅಲ್ಪಬಂಡವಾಳದಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುವ ಜನ ಪ್ರಿಯ ಉದ್ಯಮವಾಗಿದೆ. ಜೇನುತುಪ್ಪಒಂದು ಸಂಪೂರ್ಣ ಆಹಾರವಾಗಿದ್ದು, ಅಬಾಲ ವೃದ್ಧರಾಗಿ ಎಲ್ಲರೂ ಬಳಸಬ ಹುದು. ಜೇನುತುಪ್ಪವನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯವರ್ಧನೆಗೆ ಸಹಕಾರಿ ಎಂದವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ತೋಟಗಾರಿಕಾ ಅಧಿಕಾರಿ ನಿಧೀಶ್ ವಹಿಸಿದ್ದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸದಾಶಿವ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಕಳ ಜೇನು ಕೃಷಿ ಪ್ರದರ್ಶಕ ಪಿ.ಲಕ್ಷಣ ನಾಯ್ಕ ಹಾಗೂ ಕೊಕ್ಕರ್ಣೆ ಪರಿಣಿತ ಜೇನು ಕೃಷಿಕರಾದ ಗೋಪಾಲ ತರಬೇತುದಾರರಾಗಿ ಭಾಗವಹಿಸಿ ಜೇನು ಕೃಷಿಯ ಬಗ್ಗೆ ಮಾಹಿತಿ ನೀಡಿದರು.