9ರಂದು ಮಾತಾ ಅಮೃತಾನಂದಮಯಿ ಮಂಗಳೂರಿಗೆ
Update: 2016-01-07 00:35 IST
ಮಂಗಳೂರು, ಜ.6: ಮಾತಾ ಅಮೃತಾನಂದಮಯಿ ಜ.9ರಂದು ಮಂಗಳೂರಿಗೆ ಆಗಮಿಸಲಿದ್ದು, ಬೋಳೂರು ಸುಲ್ತಾನ್ ಬತ್ತೇರಿಯಲ್ಲಿರುವ ಅಮೃತ ವಿದ್ಯಾಲಯಂ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಡಾ. ಜೀವರಾಜ್ ಸೊರಕೆ ತಿಳಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 9ರಂದು ಬೆಳಗ್ಗೆ 10ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ‘ಬ್ರಹ್ಮಸ್ಥಾನ ಮಹೋತ್ಸವ’ ಹಾಗೂ ‘ಅಮೃತಸಂಗಮ 2016’ ಜರಗಲಿದೆ. ಎರಡೂ ದಿನಗಳಲ್ಲೂ ಬೆಳಿಗ್ಗೆ 7ರಿಂದ ಧ್ಯಾನ, ಲಲಿತಾ ಸಹಸ್ರನಾಮ ಅರ್ಚನೆ, ಪೂಜೆ, ಪ್ರವಚನಗಳಿರುತ್ತವೆ. ಅಮ್ಮನವರ ಸತ್ಸಂಗ ಕಾರ್ಯಕ್ರಮವು ಬೆಳಿಗ್ಗೆ 10ಕ್ಕೆ ಪ್ರಾರಂಭಗೊಳ್ಳುತ್ತದೆ ಎಂದು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಶ್ರುತಿ ಹೆಗ್ಡೆ, ಕೃಷ್ಣಸ್ವಾಮಿ, ವಾಮನ ಕಾಮತ್, ಸನತ್ ಹೆಗ್ಡೆ, ಮಂಜುನಾಥ ರೇವಣ್ಕರ್, ಮಾಧವ ಸುವರ್ಣ ಉಪಸ್ಥಿತರಿದ್ದರು.