ಜ.12ರಂದು ಸ್ವಚ್ಛ ವ್ಯಸನಮುಕ್ತ, ಸಾಮರಸ್ಯ ಪೂರ್ಣ ಮೂಡುಬಿದಿರೆ
Update: 2016-01-06 14:14 IST
ಮೂಡುಬಿದಿರೆ : ಸ್ವಾಮಿ ವಿವೇಕಾನಂದರ 153 ನೇ ಜಯಂತಿ ಪ್ರಯುಕ್ತ. "ಸ್ವಚ್ಛ ವ್ಯಸನಮುಕ್ತ ಮತ್ತು ಸಾಮರಸ್ಯಪೂರ್ಣ ಮೂಡುಬಿದಿರೆಗಾಗಿ" ಎಂಬ ಧ್ಯೇಯ ವಾಕ್ಯವನ್ನು ಒಳಗೊಂಡು ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವ ಸಮಾವೇಶವು ಜ.12 ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಮೂಡುಬಿದಿರೆ ವಿವೇಕಾನಂದ ಜನ್ಮ ದಿನೋತ್ಸವ ಸಮಿತಿ ಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮಕ್ಕೆ ಮುಂಚಿತವಾಗಿ ಬ್ರಹತ್ ಶೋಭಾಯಾತ್ರೆಯು ನಡೆಯಲಿದ್ದು ಇದರಲ್ಲಿ ವಿವಿಧ ಸಾಂಸ್ಕ್ರತಿಕ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪ್ರ.ಕಾರ್ಯದರ್ಶಿ ಧಿರೆಂದ್ರ ಜೆನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.