×
Ad

ವಿದ್ಯಾದಿನಕರ್‌ಗೆ ಲಾರೆನ್ಸ್‌ಪಿಂಟೋ ಮಾನವ ಹಕ್ಕು ಪ್ರಶಸ್ತಿ

Update: 2016-01-06 22:46 IST

ಮಂಗಳೂರು, ಜ. 6: ನಗರದ ‘ಫ್ರೆಂಡ್ಸ್ ಆಫ್ ಲಾರಿ’ ಸಂಘಟನೆಯ ವತಿಯಿಂದ ನೀಡಲಾಗುವ ಲಾರೆನ್ಸ್‌ಪಿಂಟೋ ಮಾನವ ಹಕ್ಕು-2016ರ ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ಅವರಿಗೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಜನವರಿ 24ರಂದು ಸಂಜೆ 6 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಂಗಳೂರು ವಿವಿಯ ಮಾಜಿ ಉಪಕುಲಪತಿ ಎಂ.ಐ.ಸವದತ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿದ್ಯಾದಿನಕರ್ ಅವರು ತಳವರ್ಗದ ಜನಸಾಮಾನ್ಯರ ಮಾನವ ಹಕ್ಕುಗಳಿಗಾಗಿ ನಿರಂತರವಾಗಿ ನಡೆಸುತ್ತಿರುವ ಹೋರಾಟವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

ಕಳೆದ ವರ್ಷದಲ್ಲಿ ಈ ಪ್ರಶಸ್ತಿಯನ್ನು ರಾಷ್ಟ್ರೀಯ ವಿಚಾರವಾದಿ ಸಂಘದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಅವರಿಗೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News