ಭಾರತ-ಬಹರೈನ್ ನಡುವೆ ಭೀತಿವಾದ ನಿಗ್ರಹ ಒಪ್ಪಂದಕ್ಕೆ ಸಂಪುಟದ ಅಸ್ತು

Update: 2016-01-06 18:01 GMT


ಹೊಸದಿಲ್ಲಿ,ಜ.6: ಅಂತಾರಾಷ್ಟ್ರೀಯ ಭೀತಿವಾದ ಮತ್ತು ಮಾದಕ ದ್ರವ್ಯ ಸಾಗಣೆ ವಿರುದ್ಧ ಹೋರಾಟ ಕುರಿತಂತೆ ಭಾರತ ಮತ್ತು ಬಹರೈನ್ ನಡುವೆ ಒಪ್ಪಂದವೊಂದಕ್ಕೆ ಕೇಂದ್ರ ಸರಕಾರವು ಬುಧವಾರ ಘಟನೋತ್ತರ ಅನುಮತಿಯನ್ನು ನೀಡಿತು. ಕಳೆದ ತಿಂಗಳು ಸಹಿ ಹಾಕಲಾಗಿರುವ ಈ ಒಪ್ಪಂದವು ಅಂತಾರಾಷ್ಟ್ರೀಯ ಭೀತಿವಾದ,ಬಹುರಾಷ್ಟ್ರೀಯ ಸಂಘಟಿತ ಅಪರಾಧಗಳು ಮತ್ತು ನಿಷೇಧಿತ ಔಷಧಗಳು ಹಾಗೂ ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆಯ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದೆ ಎಂದು ಸರಕಾರಿ ಹೇಳಿಕೆಯೊಂದು ತಿಳಿಸಿದೆ.
ಭಯೋತ್ಪಾದನೆ ನಿಗ್ರಹ ಒಪ್ಪಂದವು ಭೀತಿವಾದ ವಿರುದ್ಧ ಹೋರಾಟ ಸೇರಿದಂತೆ ಅಪರಾಧಗಳ ತಡೆ,ತನಿಖೆ,ಕಾನೂನು ಕ್ರಮ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಬಹರೈನ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಸ್ಥಿರೀಕರಣ ದಾಖಲೆಗಳ ವಿನಿಮಯದ ದಿನಾಂಕದಿಂದ ಈ ಒಪ್ಪಂದವು ಜಾರಿಗೆ ಬರಲಿದೆ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News