ಉದ್ಯಾವರ ಮಖಾಂ ಉರೂಸ್; ಬೃಹತ್ ರಾಲಿ
Update: 2016-01-07 12:56 IST
ಮಂಜೇಶ್ವರ: ಉದ್ಯಾವರ ಮಖಾಂ ಉರೂಸ್ ಪ್ರಯುಕ್ತ ‘ಮಾನವೀಯತೆಯ ಒಳಿತಿಗಾಗಿ ಮತ್ತು ವಿಶ್ವ ಶಾಂತಿಗಾಗಿ’ ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ರಾಲಿ ನಡೆಯಿತು.
ಉದ್ಯಾವರ ಸಾವಿರ ಜಮಾಅತ್ ಮಸೀದಿ ವಠಾರದಿಂದ ಪ್ರಾರಂಭಗೊಂಡ ರಾಲಿ, ಮಂಜೇಶ್ವರ ಒಳಗಿನ ಪೇಟೆಯಾಗಿ ಸಾಗಿ ಕುಂಜತ್ತೂರಿನಲ್ಲಿ ಕೊನೆಗೊಂಡಿತು.
ಉರೂಸ್ ಸಮಿತಿಯ ಪದಾಧಿಕಾರಿಗಳಾದ ಸಯ್ಯಿದ್ ಅತಾವುಲ್ಲಾ ತಂಙಳ್, ಪೋಕ್ಕರ್ ಅಬ್ದುಲ್ಲ ಹಾಜಿ, ಪಳ್ಳಿಕ್ಕುಞಿ ಹಾಜಿ, ಸೂಫಿ ಹಾಜಿ, ಮಾಹಿನ್ ಅಬೂಬಕರ್ ಹಾಜಿ, ಎಸ್.ಎಂ.ಬಶೀರ್, ಹನೀಫ್ ಪಿ.ಎ. ಮತ್ತಿತರರು ರಾಲಿಯ ನೇತೃತ್ವ ವಹಿಸಿದ್ದರು.