ಅಮಿತಾಬ್ ಕಾಂತ್ ನೀತಿ ಆಯೋಗದ ಸಿಇಒ
Update: 2016-01-07 23:25 IST
ಹೊಸದಿಲ್ಲಿ, ಜ.7: ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯ ಕಾರ್ಯದರ್ಶಿ ಅಮಿತಾಬ್ ಕಾಂತ್ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿ ಅಮಿತಾಬ್ ಕಾಂತ್ ಮುಂದಿನ ತಿಂಗಳ ಅಂತ್ಯದ ವೇಳೆಗೆ ತಮ್ಮ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ. ಬಳಿಕ ಅವರು ನೀತಿ ಆಯೋಗದ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ.
1980ರ ಬ್ಯಾಚ್‌ನ ಕೇರಳ ಕೇಡರ್‌ನ ಐಎಎಸ್ ಅಧಿಕಾರಿ ಅಮಿತಾಬ್ ಕಾಂತ್ ಮಾಜಿ ಐಎಎಸ್ ಅಧಿಕಾರಿ ಸಿಂಧುಶ್ರೀ ಖುಲ್ಲಾರ ಅವರ ಜಾಗಕ್ಕೆ ನೇಮಕಗೊಂಡಿದ್ದಾರೆ.