×
Ad

ಉನ್ನತ ಪ್ರಾಸಿಕ್ಯೂಟರ್ ಆಗಿ ಸಿಖ್ ಅಮೆರಿಕನ್

Update: 2016-01-08 00:01 IST

ನ್ಯೂಜೆರ್ಸಿ, ಜ.7: ನ್ಯೂಜೆರ್ಸಿಯ ಅತಿ ಜನಸಾಂದ್ರತೆಯ ಕೌಂಟಿಯೊಂದರ ಉನ್ನತ ಪ್ರಾಸಿಕ್ಯೂಟರ್ ಆಗಿ ಸಿಖ್-ಅಮೆರಿಕನ್ ಗುರುಬೀರ್ ಗ್ರೆವಾಲ್(42) ನೇಮಕಗೊಂಡಿದ್ದು, ಈ ಪ್ರಾಂತದಲ್ಲಿ ಇಂತಹ ಉನ್ನತ ಹುದ್ದೆಗೇರಿರುವ ಮೊತ್ತ ಮೊದಲ ದಕ್ಷಿಣ ಏಶ್ಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗುರ್‌ಬೀರ್ ಗ್ರೆವಾಲ್, ಜನವರಿ 4ರಂದು ನ್ಯೂಜೆರ್ಸಿಯ ಬರ್ಜೆನ್ ಕೌಂಟಿಯ ಉನ್ನತ ಪ್ರಾಸಿಕ್ಯೂಟರ್ ಆಗಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ 14 ವರ್ಷಗಳಿಂದ ಈ ಹುದ್ದೆಯನ್ನು ನಿರ್ವಹಿಸುತ್ತಿದ್ದ ಜಾನ್ ಮಾಲಿನೆಲಿಯವರ ಅಧಿಕಾರಾವಧಿ ಮುಕ್ತಾಯಗೊಂಡ ಬಳಿಕ ಗುರ್‌ಬೀರ್ ನೇಮಕಗೊಂಡಿದ್ದಾರೆ. ಮಾಜಿ ಫೆಡರಲ್ ಪ್ರಾಸಿಕ್ಯೂಟರ್ ಗುರ್‌ಬೀರ್ ಹಲವು ವೈಟ್‌ಕಾಲರ್ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿ ಹೆಸರು ಗಳಿಸಿದ್ದರು. ಇತ್ತೀಚೆಗೆ ಅವರು ನೆವಾರ್ಕ್‌ನ ಆರ್ಥಿಕ ಅಪರಾಧಗಳ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News