ಮಾಣಿ: ಮೆಹೆಫಿಲೆ ಮೀಲಾದ್ ಕಾರ್ಯಕ್ರಮ

Update: 2016-01-07 18:46 GMT

ಮಾಣಿ, ಜ.7: ಗುಂಪುಗಳ ಹೆಸರಲ್ಲಿ ಪರಸ್ಪರ ಕೆಸರೆರಚುವುದನ್ನು ನಿಲ್ಲಿಸಿ ಶಾಂತಿ ಸೌಹಾರ್ದಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಜಂಇಯ್ಯತ್ತುಲ್ ಉಲಮಾದ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಹೇಳಿದರು.

ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಶನ್ ಇತ್ತೀ ಚೆಗೆ ಮಾಣಿ ದಾರುಲ್ ಇರ್ಷಾದ್‌ನಲ್ಲಿ ನಡೆಸಿದ ಮೆಹ್ಫಿಲೇ ಮೀಲಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾರುಲ್ ಇರ್ಷಾದ್ ಮುದರ್ರಿಸ್ ಉಮರ್ ಮದನಿ ಮಚ್ಚಂಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಇಬ್ರಾಹೀಂ ಸಅದಿ ಮಾಣಿ ವೌಲಿದ್ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. ಮನ್ಶರುಸ್ಸಖಾಫತಿಲ್ ಇಸ್ಲಾಮಿಯ್ಯದ ಪ್ರೊ. ವೌಲಾನ ಯೂಸುಫ್ ರಝಾ ಅಮ್ಜದಿ ದಾವಣಗೆರೆ ಮುಖ್ಯ ಭಾಷಣ ಮಾಡಿದರು. ಎ.ಕೆ.ರಝಾ ಅಮ್ಜದಿ ಕುಂದಾಪುರ, ಉಮರ್ ಅಮ್ಜದಿ ಕುಕ್ಕಿಲ, ನಝೀರ್ ಅಮ್ಜದಿ ಸರಳಿಕಟ್ಟೆ ಮಾತನಾಡಿದರು. ಇಬ್ರಾಹೀಂ ಅಮ್ಜದಿ ಮಂಡೆಕೋಲು ಅಮ್ಜದೀಸ್ ‘ಲೋಗೊ’ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಿತ್ತೂರು ಕೆಜಿಎನ್ ದಅವಾ ಕಾಲೇಜಿನ ಪ್ರೊ. ಅಹ್ಮದ್ ಶರೀಫ್ ಸಅದಿ ಕಿಲ್ಲೂರು, ಝೈನುದ್ದೀನ್ ಅಮ್ಜದಿ ತೆಕ್ಕಾರ್,ಶರೀಫ್ ಅಮ್ಜದಿ ಎಣ್ಮೂರು,ಅಶ್ರಫ್ ಅಮ್ಜದಿ ಪಾವೂರು,ರಫೀಕ್ ಅಮ್ಜದಿ ಬೆಳ್ಳಾರೆ ಉಪಸ್ಥಿತರಿದ್ದರು.

ಅಮ್ಜದೀಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News