×
Ad

ವಿಟ್ಲ: ಮೋತಿ ಸಿಟಿ ವಾಣಿಜ್ಯ ಸಂಕೀರ್ಣ ಉದ್ಘಾಟನೆ

Update: 2016-01-08 00:18 IST

ವಿಟ್ಲ, ಜ.7: ಇಲ್ಲಿನ ಶಾಲಾ ರಸ್ತೆಯ ಬಳಿಯ ಮೋತಿ ಸಿಟಿ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು. ವಾಣಿಜ್ಯ ಸಂಕೀರ್ಣವನ್ನು ಸೈಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ಮದನಿ ತಂಙಳ್ ಆದೂರು ಉದ್ಘಾಟಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ದುಆ ನೆರವೇರಿಸಿದರು. ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನಗೈದರು. ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ವಿಟ್ಲ ಠಾಣಾಧಿಕಾರಿ ಪ್ರಕಾಶ್ ದೇವಾಡಿಗ, ವಿಟ್ಲ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಹಸನ್ ಅರ್ಶದಿ, ಅಳಿಕೆ ಜುಮಾ ಮಸೀದಿ ಖತೀಬ್ ಅಬ್ದುಲ್ಲಾ ಝೈನಿ, ಅಲ್ಮಾನ್ ಇನ್‌ಫ್ರಾಟೆಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ರಫ್ ಹಸನ್, ಮಂಗಳೂರು ಅಲಾಮ್ಸ್ ಅಸೋಸಿಯೇಟ್ಸ್‌ನ ರಿಯಾಝ್ ಆಲಂ, ವಿಠಲ ಪಪೂ ಕಾಲೇಜು ಉಪ ಪ್ರಾಂಶುಪಾಲ ಕಿರಣ್‌ಕುಮಾರ್, ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ, ಅಳಿಕೆ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹೀಂ ಮುಸ್ಲಿಯಾರ್, ಉದ್ಯಮಿಗಳಾದ ವಿ.ಎಚ್.ಅಶ್ರಫ್, ಶಾಕಿರ್ ಅಳಕೆಮಜಲು, ವಿ.ಕೆ.ಎಂ.ಅಶ್ರಫ್, ಅಬ್ದುಲ್ಲಾ ಹಾಜಿ ಬೈರಿಕಟ್ಟೆ, ಅಬ್ದುಲ್ಲಾ ಹಾಜಿ ಕಾನತ್ತಡ್ಕ, ವಿ.ಎಸ್. ಇಬ್ರಾಹೀಂ ಒಕ್ಕೆತ್ತೂರು, ಹಮೀದ್ ಕಂಬಳಬೆಟ್ಟು, ಫೈಝಲ್, ಆದಂ ಸಾಹೇಬ್, ವಿ. ಅಬ್ದುಲ್ ಖಾದರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಕೀರ್ಣದ ಆಡಳಿತ ಪಾಲುದಾರ ಅಬ್ದುಲ್ ರವೂಫ್ 
ಮಾತನಾಡಿ, ಈ ವಾಣಿಜ್ಯ ಸಂಕೀ ರ್ಣದಲ್ಲಿ ಒಂದು ಮಿನಿ ಹಾಲ್, 2 ಫ್ಲಾಟ್‌ಗಳು ಹಾಗೂ 27 ವಾಣಿಜ್ಯ ಮಳಿಗೆಗಳು ಇವೆ ಎಂದರು. ಪಾಲುದಾರರಾದ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಮುಸ್ತಫಾ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News