ಇಂದು ಅಲ್ಮದೀನದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್
Update: 2016-01-08 00:19 IST
ನರಿಂಗಾನ, ಜ.7: ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್‌ನಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಜ.8ರಂದು ನಡೆಯಲಿದೆ.
ಅಪರಾಹ್ನ 2ಕ್ಕೆ ಧ್ವಜಾರೋಹಣ, ಬಳಿಕ ಅನ್ವರ್ ಮರ್ಝೂಕಿ ತಂಡದಿಂದ ಬುರ್ದಾ ಮಜ್ಲಿಸ್, ನಅತೇ ಶರೀಫ್ ಕಾರ್ಯಕ್ರಮವಿದೆ. ಅಸರ್ ನಮಾಝ್ ಬಳಿಕ ಮೌಲೀದ್ ಮಜ್ಲಿಸ್ ನಡೆಯಲಿದೆ.
ಮಗ್ರಿಬ್ ನಮಾಝ್ ಬಳಿಕ ರಫೀಕ್ ಸಅದಿ ದೇಲಂಪಾಡಿಯವರಿಂದ ಮದ್‌ಹುರ್ರಸೂಲ್ ಪ್ರವಚನ, ರಾತ್ರಿ 8ಕ್ಕೆ ಅಸ್ಸೈಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ನೇತೃತ್ವದಲ್ಲಿ ಸ್ವಲಾತ್, ದ್ರಿಕ್ಸ್ ನಡೆಯಲಿದ್ದು, ಶೈಖುನಾ ಅಬ್ಬಾಸ್ ಉಸ್ತಾದ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.