ಬಹರೈನ್: ಇಂದು ಇಶ್ಕೇ ರಸೂಲ್ ಕಾನ್ಫರೆನ್ಸ್
Update: 2016-01-08 00:24 IST
ಬಹರೈನ್, ಜ.7: ಕೆಸಿಎಫ್ ಬಹರೈನ್ ವತಿಯಿಂದ ಅಂತಾರಾಷ್ಟ್ರೀಯ ಇಶ್ಕೇ ರಸೂಲ್ ಕಾನ್ಫರೆನ್ಸ್ ಜ.8ರಂದು ಸಂಜೆ 7ಕ್ಕೆ ಬಹರೈನ್‌ನ ರಾಜಧಾನಿ ಮನಾಮ ಮೈದಾನದಲ್ಲಿ ನಡೆಯಲಿದೆ.
ಹನೀಫ್ ಖಾಸಿಮಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸುವರು. ಸೈಯದ್ ಫಝಲ್ ಕೋಯಮ್ಮ ತಂಙಳ್ ದುಆಗೈಯುವರು.ಎಸ್‌ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಪ್ರವಚನ ನೀಡುವರು. ಕರ್ನಾಟಕ ಎಸ್ಸೆಸ್ಸೆಫ್ ಉಪಾಧ್ಯಕ್ಷ ಇಸ್ಮಾಯೀಲ್ ಸಅದಿ ಕಿನ್ಯ ಸಂದೇಶ ಭಾಷಣ ಮಾಡುವರು. ಮಾಸ್ಟರ್ ಶಮ್ಮಾಸ್ ಮಂಗಳೂರು ಅವರಿಂದ ನಅತೇ ಶರೀಫ್ ಮತ್ತು ಬುರ್ದಾ ಮಜ್ಲಿಸ್ ನಡೆಯಲಿದೆ. ಬಹರೈನ್‌ನ ಉದ್ಯಮಿ, ಮಂಗಳೂರು ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಮೆಟಲ್ಕೋ ರಝಾಕ್ ಹಾಜಿ ಮೊದಲಾದವರು ಉಪಸ್ಥಿತರಿರುವರು.