×
Ad

ಅಖಿಲ ಭಾರತ ವಿವಿ ಅಥ್ಲೆಟಿಕ್; ಆಳ್ವಾಸ್ ಕ್ರೀಡಾಪಟುಗಳಿಂದ ಉತ್ತಮ ಸಾಧನೆ: ಮೋಹನ್ ಆಳ್ವ

Update: 2016-01-08 00:25 IST

ಮೂಡುಬಿದಿರೆ, ಜ.7: ಪಟಿಯಾಲದ ಪಂಜಾಬ್ ವಿವಿ ಆಶ್ರಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 76ನೆ ಅಖಿಲ ಭಾರತ ವಿವಿ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿರುವ 65 ಕ್ರೀಡಾಪಟುಗಳಲ್ಲಿ 51 ಮಂದಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕ್ರೀಡಾ ಪಟುಗಳಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.

ಅವರು ಗುರುವಾರದಂದು ತನ್ನ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ದೇಶದ 80 ವಿವಿಗಳಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿರುವ ಆಳ್ವಾಸ್‌ನ ಕ್ರೀಡಾಪಟುಗಳು ಅ.ಭಾ. ವಿವಿ ಅಥ್ಲೆಟಿಕ್ ಕೂಟದಲ್ಲಿ ಒಟ್ಟು 8 ಚಿನ್ನ, 5 ಬೆಳ್ಳಿ, ಹಾಗೂ ಒಂದು ಕಂಚಿನ ಪದಕ ಗೆದ್ದು, ಮಂಗಳೂರು ವಿವಿ ಸಮಗ್ರರನ್ನರ್ ಅಪ್ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಆಳ್ವಾಸ್ ವಿದ್ಯಾರ್ಥಿಗಳಾದ ಪ್ರವೀಣ್ ಮುತ್ತುಕುಮಾರ್ 100 ಮೀ. ಓಟದಲ್ಲಿ ಚಿನ್ನ, ದಾರುಣ್ 400 ಮೀ. ಹಾಗೂ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನ, ಭರತ್ 800 ಮೀ. ಓಟದಲ್ಲಿ ಚಿನ್ನ, ಕುಲ್‌ದೀಪ್ 20 ಕಿ.ಮೀ. ನಡಿಗೆಯಲ್ಲಿ ಚಿನ್ನ, ರಂಜಿತ್ 10,000 ಮೀ. ಓಟದಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಪುರುಷರ 1,500 ಮೀ. ಮತ್ತು 5,000 ಮೀ. ಓಟದಲ್ಲಿ ಅಭಿಷೇಕ್ ಪಾಲ್ ಬೆಳ್ಳಿ, ಮಹಿಳೆಯರ ಶಿಲ್ಪಾಚಾಕೋ ಟ್ರಿಪಲ್ ಜಂಪ್‌ನಲ್ಲಿ ಬೆಳ್ಳಿ, ಜಾವೆಲಿನ್ ತ್ರೋದಲ್ಲಿ ರಶ್ಮಿ ಬೆಳ್ಳಿ, ಲಾಂಗ್ ಜಂಪ್‌ನಲ್ಲಿ ಐಶ್ವರ್ಯ ಬೆಳ್ಳಿ, ಪುರುಷರ 4್ಡ
100 ಮೀ. ರಿಲೆಯಲ್ಲಿ ಬೆಳ್ಳಿ, ಶಾಟ್‌ಪುಟ್‌ನಲ್ಲಿ ನಮಿತಾ ಕಂಚಿನ ಪದಕಗಳನ್ನು ಗಳಿಸಿದ್ದಾರೆ ಎಂದು ತಿಳಿಸಿದರು.

ಆಳ್ವಾಸ್ ಹೆಸರಿನಲ್ಲಿ 3 ಕೂಟ ದಾಖಲೆಗಳು

ಈಗಾಗಲೇ ನಡೆದಿರುವ ಅ.ಭಾ. ವಿವಿ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 3 ಕೂಟ ದಾಖಲೆಗಳು ಆಳ್ವಾಸ್ ಸಂಸ್ಥೆಯ ಕ್ರೀಡಾಪಟುಗಳ ಹೆಸರಿನಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಕಳೆದ ಬಾರಿ ಮೂಡುಬಿದಿರೆಯಲ್ಲಿ ನಡೆದ ಅಥ್ಲೆಟಿಕ್ ಕೂಟದಲ್ಲಿಯೂ ಮಂಗಳೂರು ವಿವಿ ರನ್ನರ್ ಅಪ್ ಪ್ರಶಸ್ತಿಯನ್ನು ಗಳಿಸಿತ್ತು. ಆ ತಂಡದಲ್ಲಿದ್ದ ಹೆಚ್ಚಿನ ಕ್ರೀಡಾಪಟುಗಳು ಆಳ್ವಾಸ್‌ನವರಾಗಿದ್ದಾರೆ ಎಂದು ಆಳ್ವ ತಿಳಿಸಿದರು.

ಮಂಗಳೂರು ವಿವಿ ಆಶ್ರಯದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ವಿವಿ ಪುರುಷರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಮಂಗಳೂರು ವಿವಿ ತಂಡದ ಎಲ್ಲಾ 10 ಮಂದಿ ಆಟಗಾರರು ಆಳ್ವಾಸ್ ವಿದ್ಯಾರ್ಥಿಗಳು ಎಂದು ತಿಳಿಸಿದರು. ಇತ್ತೀಚೆಗೆ ನಡೆದ ಮಂಗಳೂರು ಬಾಲ್ ಬ್ಯಾಡ್ಮಿಂಟನ್, ಗುಡ್ಡಗಾಡು ಓಟ ಸ್ವರ್ಧೆಗಳಲ್ಲಿ ಆಳ್ವಾಸ್ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ ಎಂದುಡಾ.ಆಳ್ವ ನುಡಿದರು. ಸುದ್ದಿಗೋಷ್ಠಿಯಲ್ಲಿ ಆಳ್ವಾಸ್‌ನ ದೈಹಿಕ ಶಿಕ್ಷಕಿ ಮೀನಾಕ್ಷಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News