×
Ad

ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡೋತ್ಸವ

Update: 2016-01-08 00:26 IST

ಮಂಗಳೂರು, ಜ.7: ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಕ್ರೀಡೋತ್ಸವವು ಹಾಜಿ ಬಿ.ಎಚ್.ಬಿ. ಖಾದರ್‌ರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಎಎಸ್ಪಿ ರಾಹುಲ್ ಕುಮಾರ್, ಡಿಸಿಐಬಿ ಇನ್‌ಸ್ಪೆೆಕ್ಟರ್ ಅಮಾನುಲ್ಲಾ ಎ., ಟ್ರಾಫಿಕ್ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಅಯ್ಯ ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಹಾಜಿ ಮುಹ ಮ್ಮದಲಿ, ಅಧ್ಯಕ್ಷ ಹಾಜಿ ಬಿ.ಎ. ಸುಲೈಮಾನ್, ಕಾರ್ಯದರ್ಶಿ ಹಾಜಿ. ಬಿ.ಎ. ಮುಹಮ್ಮದ್, ಕೋಶಾಧಿಕಾರಿ ಹಾಜಿ. ಬಿ. ಎಚ್. ಬಿ. ಸಾದಿಕ್, ಸದಸ್ಯರಾದ ರಿಯಾಝ್ ಹುಸೈನ್, ಪಿ.ಟಿ.ಎ ಅಧ್ಯಕ್ಷ ಐ. ಅಬ್ಬಾಸ್, ಕಾರ್ಯದರ್ಶಿ ಬಿ. ಎಂ. ಇಲ್ಯಾಸ್, ಕ್ರೀಡಾ ಕಾರ್ಯ ದರ್ಶಿ ಶಬೀರ್, ತೌಹೀದ್ ಹಾಗೂ ಮನಾರುಲ್ ಶಾಲೆಯ ಶಿಕ್ಷಕ- ಸಿಬ್ಬಂದಿ ವರ್ಗ ಮತ್ತಿತರರು ಪಾಲ್ಗೊಂಡಿದ್ದರು.

ಪಥ ಸಂಚಲನವನ್ನು ದೈಹಿಕ ಶಿಕ್ಷಕ ಗಾಯತ್ರಿ. ಬಿ.ಸಿ., ಪ್ರಕಾಶ್ ನಿರೂಪಿಸಿದರು. ಶಿಕ್ಷಕಿಯರಾದ ನಸೀಮ್ ನೂರ್ ಮತ್ತು ಹರ್ಶಿತಾ ಸ್ವಾಗತಿಸಿದರು. ನಾಗವೇಣಿ ವಂದಿಸಿದರು. ಶಿಲ್ಪಾ ಮತ್ತು ಮೆಹನಾಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News