ಇಂದಿನ ಕಾರ್ಯಕ್ರಮ
ಇಂದು ಸಾಮಾನ್ಯ ಸಭೆ
ಉಡುಪಿ, ಜ.7: ಉಡುಪಿ ನಗರ ಸಭೆಯ ಸಾಮಾನ್ಯ ಸಭೆಯು ಜ.8 ರಂದು ಸತ್ಯಮೂರ್ತಿ ಸಭಾಂಗಣ ದಲ್ಲಿ ನಡೆಯಲಿದೆ ಎಂದು ನಗರಸಭಾ ಪೌರಾಯುಕ್ತರ ಪ್ರಕಟನೆ ತಿಳಿಸಿದೆ.
ಇಂದು ದಂತ ತಪಾಸಣಾ ಶಿಬಿರ
ಉಡುಪಿ, ಜ.7: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಸ್ತೂರ್ಬಾ ದಂತ ವೈದ್ಯಕೀಯ ಮಹಾವಿದ್ಯಾಲಯ ಮಣಿಪಾಲ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಶಿಬಿರವು ಜ.8ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 60 ವರ್ಷ ಮೇಲ್ಪಟ್ಟ ಬಿಪಿಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ಉಚಿತ ದಂತ ಪಂಕ್ತಿ ನೀಡಲು ಉದ್ದೇಶಿಸಿರುವುದರಿಂದ ಖಾಸಗಿ ದಂತ ವೈದ್ಯ ಕಾಲೇಜುಗಳ ಸಹಕಾರದೊಂದಿಗೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅರ್ಹ ಫಲಾನುಭವಿಗಳು ಜ.8ರಂದು ಬಿಪಿಎಲ್ ಪಡಿತರ ಚೀಟಿಯೊಂದಿಗೆ ಜಿಲ್ಲಾ ಆಸ್ಪತ್ರೆ ಆವರಣ ದಲ್ಲಿ ಏರ್ಪಡಿಸಿರುವ ದಂತ ತಪಾಸಣಾ ಶಿಬಿರದಲ್ಲಿ ಹಾಜರಾಗಿ ತಪಾಸಣೆಗೊಳಪಟ್ಟು, ದಂತ ಪಂಕ್ತಿ ಪಡೆಯಲು ಅರ್ಹರಿದ್ದಲ್ಲಿ ಹೆಸರು ನೋಂದಾಯಿಸಿ ವೈದ್ಯರ ಸಲಹೆಯಂತೆ ಅವರು ನಿಗದಿ ಪಡಿಸಿದ ದಿನಗಳಂದು ಸಂಬಂಧಿಸಿದ ದಂತ ವೈದ್ಯ ಕಾಲೇಜಿಗೆ ಹಾಜರಾಗಿ ದಂತ ಪಂಕ್ತಿ ಪಡೆಯುವಂತೆ ಪ್ರಕಟನೆೆ ತಿಳಿಸಿದೆ.
ಇಂದಿನಿಂದ ಮೀಲಾದ್ ಕಾರ್ಯಕ್ರಮ
ವಿಟ್ಲ, ಜ.7: ಪಾಣೆಮಂಗಳೂರಿನ ಕೌಡೇಲು ದಾರುಲ್ ಇಝ್ಝ ವಿದ್ಯಾಸಂಸ್ಥೆಯಲ್ಲಿ ಸ್ವಲಾತ್ ವಾರ್ಷಿಕೋತ್ಸವ, ಪೊಸೋಟು ತಂಙಳ್ ಅನುಸ್ಮರಣೆ ಹಾಗೂ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಜ.8,9ರಂದು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮ್ಯಾನೇಜರ್ ಅರ್ಶದ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ಅಖಂಡ ಭಜನಾ ಸಪ್ತಾಹ
ಮಂಗಳೂರು, ಜ.7: ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವ ಸ್ಥಾನದಲ್ಲಿ ವಿಷ್ಣುಮೂರ್ತಿ ಭಜನಾ ಮಂಡಳಿಯ 8ನೆ ಅಖಂಡ ಭಜನಾ ಸಪ್ತಾಹ ಜ.8ರಿಂದ 14ರವರೆಗೆ ನಡೆಯ ಲಿದೆ ಎಂದು ಭಜನಾ ಮಂಡಳಿಯ ಉಪಾಧ್ಯಕ್ಷ ಎಂ.ಸದಾಶಿವ ಕುಳಾಯಿ ತಿಳಿಸಿದರು.