ಚುಟುಕು ಸುದ್ದಿಗಳು
ನಾಳೆ ಯಕ್ಷಗಾನ ಪ್ರದರ್ಶನ
ಮಂಗಳೂರು, ಜ.7: ಶ್ರೀ ಕೃಷ್ಣ ಭಜನಾ ಮಂಡಳಿ ಹಾಗೂ ಹತ್ತು ಸಮಸ್ತರ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಬೋಂದೆಲ್ ಕೃಷ್ಣನಗರದಲ್ಲಿ ಜ.9ರಂದು ರಾತ್ರಿ 7ರಿಂದ 12ರ ತನಕ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸುದರ್ಶನ ವಿಜಯ ಭಾರ್ಗವ ವಿಜಯ ಎಂಬ ಪೌರಾಣಿಕ ಕಥಾಭಾಗ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ನಾಳೆಯಿಂದ ಸುಳ್ಯ ತಾಲೂಕು ಮಟ್ಟದ ಯುವಜನ ಮೇಳ
ಸುಬ್ರಹ್ಮಣ್ಯ, ಜ.7: ಸುಳ್ಯ ತಾಲೂಕು ಮಟ್ಟದ ಯುವಜನಮೇಳ ಜ.9, 10ರಂದು ಸುಬ್ರಹ್ಮಣ್ಯದಲ್ಲಿ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಮೇಳ ಉದ್ಘಾಟಿಸಲಿದ್ದು, ಶಾಸಕ ಎಸ್. ಅಂಗಾರ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಯುವಕ ಮತ್ತು ಯವತಿಯರ ವಿಭಾಗಕ್ಕೆ ಪ್ರತ್ಯೇಕವಾಗಿ ಗುಂಪು ಹಾಗೂ ವೈಯಕ್ತಿಕ ಸ್ಫರ್ಧೆಗಳು ನಡೆಯಲಿವೆ. ಸ್ಫರ್ಧೆಗಳಲ್ಲಿ ರೆಕಾರ್ಡ್ ಹಾಡುಗಳಿಗೆ ಅವಕಾಶವಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಕಾರ್ಯದರ್ಶಿ ದಿಲೀಪ್ ಬಾಬ್ಲುಬೆಟ್ಟು, ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ವಿಠ್ಠಲ್ ರಾವ್, ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಗಿರಿಧರ ಸ್ಕಂದ, ಸುಳ್ಯ ಜನಜಾಗೃತಿ ವೇದಿಕೆ ಅಧ್ಯಕ್ಷೆ ವಿಮಲಾರಂಗಯ್ಯ, ಇನ್ನರ್‌ವಿಲ್ ಅಧ್ಯಕ್ಷೆ ಶೋಭಾ ಗಿರಿಧರ ಉಪಸ್ಥಿತರಿದ್ದರು.
ಜ.10: ಆರಾಧನೋತ್ಸವ
ಮಂಗಳೂರು, ಜ.7: ತ್ಯಾಗರಾಜ ದೀಕ್ಷಿತರು, ಶ್ಯಾಮಶಾಸಿ, ಪುರಂದರ ದಾಸ, ಕನಕದಾಸ ಹಾಗೂ ವಾದಿರಾಜ ಅವರ ‘ಆರಾಧನೋತ್ಸವ’ ಜ.10ರಂದು ಬೆಳಗ್ಗೆ 10ಕ್ಕೆ ಮಂಗಳೂರು ವಿವಿ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಸೋಮೇಶ್ವರ: ಕಾಮಗಾರಿಗೆ ಶಿಲಾನ್ಯಾಸ
ಉಳ್ಳಾಲ, ಜ.7: ಸರಸ್ವತಿ ಕಾಲನಿಯಿಂದ ಸೋಮೇಶ್ವರದವರೆಗೆ ಶಾಸಕರ ವಿಶೇಷ ಅನುದಾನದಲ್ಲಿ ಆಗಲಿರುವ ರಸ್ತೆಯ ಕಾಂಕ್ರಿಟೀಕರಣಕ್ಕೆ ಸಚಿವ ಯು.ಟಿ. ಖಾದರ್ ಶಿಲಾನ್ಯಾಸಗೈದರು. ಬಳಿಕ ಮಾತನಾಡಿದ ಅವರು, ಉಳ್ಳಾಲ ಭಾಗದ ಎಲ್ಲಾ ಒಳರಸ್ತೆಗಳಿಗೆ ಹೆಚ್ಚಿನ ಒಲವು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಳ್ಳಾಲವನ್ನು ರಾಜ್ಯದಲ್ಲಿ ಅಭಿವೃದ್ಧಿ ಗ್ರಾಮವನ್ನಾಗಿ ರೂಪಿಸಲಾಗುವುದು ಎಂದರು. ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಸೋಮೇಶ್ವರ ಗ್ರಾಪಂ ಸದಸ್ಯರಾದ ಶಾಲಿನಿ.ವಿ.ಶೆಟ್ಟಿ, ಮಾಧವ ಗಟ್ಟಿ, ನೋವಿತಾ.ವಿ.ಗಟ್ಟಿ, ಸದಾಶಿವ ಉಳ್ಳಾಲ, ದಿನೇಶ್ ಕುಂಪಲ ಉಪಸ್ಥಿತರಿದ್ದರು.
ವೃತ್ತಿ ಮಾರ್ಗದರ್ಶನ ಶಿಬಿರ
ವಿಟ್ಲ,ಜ.7: ಬಂಟ್ವಾಳದ ಎಕ್ಸೆಲ್ ಕೋಚಿಂಗ್ ಸೆಂಟರ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಪ್ರೊ. ರೊನಾಲ್ಡ್ ಪಿಂಟೊ ಭಾಗವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥ ರೋಹನ್ ಕ್ರಾಸ್ತ ಮಾತನಾಡಿದರು. ಪ್ರಾಧ್ಯಾಪಕ ಉದಯ ಕುಮಾರ್ ವಂದಿಸಿದರು. ವಿದ್ಯಾರ್ಥಿನಿ ಸೌಭಾಗ್ಯ ಎ. ಕಾರ್ಯಕ್ರಮ ನಿರೂಪಿಸಿದರು.