ಕಾಸರಗೋಡು: ಕಾರ್ಯದರ್ಶಿ ಟಿ. ಎಂ ಜೋಸ್ ಮೇಲೆ ಹಲ್ಲೆ ಖಂಡಿಸಿ ಮುಷ್ಕರ
Update: 2016-01-08 09:01 IST
ಕಾಸರಗೋಡು ಜಿಲ್ಲೆಯಲ್ಲಿ ಜ.8ರಂದು ಮಧ್ಯಾಹ್ನ ತನಕ ವರ್ತಕರ ಮುಷ್ಕರ ನಡೆಸುತ್ತಿದ್ದಾರೆ .
ಮಧ್ಯಾಹ್ನ ೧೨ ಗಂಟೆ ತನಕ ಅಂಗಡಿ - ಮುಂಗಟ್ಟುಗಳು ಬಂದ್ ಮಾಡಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ . ಇದರಿಂದ ಜಿಲ್ಲೆಯಲ್ಲಿ ಅಂಗಡಿ - ಮುಂಗದು ಗಳು ಬಾಗಿಲು ತೆರೆಯಲಿಲ್ಲ.
ಚಿತ್ತಾರಿಕಾಲ್ ನಲ್ಲಿ ತಲೆ ಹೊರೆ ಕಾರ್ಮಿಕರು ಜೋಸ್ ರವರ ಮೇಲೆ ನಿನ್ನೆ ಹಲ್ಲೆ ನಡೆಸಿದ್ದರು . ಕ್ಷುಲ್ಲಕ ಕಾರಣಕ್ಕೆ ತಲೆ ಹೊರೆ ಕಾರ್ಮಿಕರು ಮತ್ತು ಜೋಸ್ ನಡುವೆ ಮಾತಿನ ಚಕಮಕಿ ನಡೆದಿದ್ದು , ಈ ಸಂದರ್ಭದಲ್ಲಿ ಜೋಸ್ ರವರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ . ಈ ಹಿನ್ನಲೆ ಯಲ್ಲಿ ಧರಣಿ ನಡೆಸಲು ವರ್ತಕರ ಸಂಘದ ಜಿಲ್ಲಾ ಸಮಿತಿ ತೀರ್ಮಾನಿಸಿದೆ .