×
Ad

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ

Update: 2016-01-08 14:39 IST

 ಮೂಡುಬಿದಿರೆ : ಜಮೀಯ್ಯತ್ತುಲ್ ಫಲಾಹ್ ಮೂಡಬಿದಿರೆ ಹಾಗೂ ಜೆ.ಸಿ.ಐ ಮೂಡಬಿದಿರೆ ತ್ರಿಭುವನ್ ಇದರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಮತ್ತು ಅಧ್ಯಯನ ತಂತ್ರ ಕಾರ್ಯಗಾರವನ್ನು ಮೂಡಬಿದಿರೆ ವಲಯ ಮಟ್ಟದಲ್ಲಿ ಆಯೋಜನೆ ಮಾಡಲಾಗಿದ್ದು, ಮೂಡಬಿದಿರೆ ವಲಯದ ಸುಮಾರು 23 ಪ್ರೌಢಶಾಲೆಗಳಲ್ಲಿ ಜನವರಿ ತಿಂಗಳ ಪೂರ್ತಿ ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಜೆ.ಸಿ.ಐ ಮೂಡಬಿದ್ರೆ ತ್ರಿಭುವನ್ ಸಹಯೋಗದಿಂದ ನಡೆಸಲಾಗುತ್ತಿದ್ದು, ಮಹಮ್ಮದೀಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜ.2 ಶನಿವಾರ ಮದ್ಯಾಹ್ನ ಮೂಡಬಿದ್ರೆಯ ಅಬ್ಬಾಸ್ ಡಿಸೈನರ್ ಡೋರ್ಸ್‌ ಇದರ ಮಾಲಕರಾದ ಮಹಮ್ಮದ್ ಆಲಿ ಅಬ್ಬಾಸ್ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಜೆ.ಸಿ.ಐ ಮೂಡಬಿದ್ರೆ ತ್ರಿಭುವನ್ ಇದರ ಅಧ್ಯಕ್ಷೆ ರಶ್ಮಿತಾ ಜೈನ್‌ರವರು ವಹಿಸಿದ್ದರು. ಜಮೀಯ್ಯತ್ತುಲ್ ಫಲಾಹ್ ಮೂಡಬಿದಿರೆ ಘಟಕದ ಅಧ್ಯಕ್ಷ ಎಸ್.ಎ ಗಪೂರ್, ಕಾರ್ಯದರ್ಶಿ ಸಲೀಂ ಹಂಡೇಲು, ಕೋಶಾಧಿಕಾರಿ ಹಸದುಲ್ಲಾ ಇಸ್ಮಾಯಿಲ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಮೀಯತ್ತುಲ್ ಫಲಾಹ್ ಕೋಶಾಧಿಕಾರಿಯವರಾದ ಹಸದುಲ್ಲಾ ಇಸ್ಮಾಯಿಲ್ ಉಪಸ್ಥಿತರಿದ್ದರು. ಜಮೀಯ್ಯತ್ತುಲ್ ಫಲಾಹ್ ಇದರ ತರಬೇತುದಾರರಾದ ಜನಾಬ್ ಅಬ್ದುಲ್ ರಝಾಕ್ ಅನಂತಾಡಿಯವರು ತರಬೇತಿಯನ್ನು ನೀಡಿದರು. ಕಾರ್ಯಕ್ರಮವನ್ನು ಜೆ.ಸಿ.ಐ ಯ ವಲಯ ತರಬೇತುದಾರರಾದ ವಿನಯ ಚಂದ್ರರವರು ನಿರೂಪಿಸಿದರು. ಕಾರ್ಯದರ್ಶಿ ಸಲೀಂ ಹಂಡೇಲು ಧನ್ಯವಾದ ಸಮರ್ಪಣೆಯನ್ನು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News