×
Ad

ರಾಜ್ಯದಲ್ಲಿ ಪ್ರಸ್ತುತ ರಾವಣ ಸರಕಾರ: ಸಂಸದ ನಳಿನ್ ಕುಮಾರ್ ಆರೋಪ

Update: 2016-01-08 14:52 IST

ಕಿನ್ನಿಗೋಳಿ, ಜ.8: ರಾಜ್ಯದಲ್ಲಿ ಪ್ರಸ್ತುತ ರಾವಣ ಸರಕಾರ ಇದೆ ಎಂದು ಸಂಸದ ನಳಿನ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
   

ಶುಕ್ರವಾರ ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮರಳು ಮಾಫಿಯಾದ ಹಣವನ್ನು ಚುನಾವಣೆಗಳಿಗೆ ಬಳಸಿಕೊಳ್ಳುವ ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಲ್ಯಾಂಡ್ ಮಾಫಿಯಾ, ಮರಳು ಮಾಫಿಯಾಗಳ ಹಣವನ್ನು ಚುನಾವಣೆಗಳಿಗೆ ಬಳಸಿಕೊಂಡು ಕೊಲೆ, ದರೋಡೆ, ಲಂಚ ಕೋರರಿಗೆ ಭವಿಷ್ಯ ಕಲ್ಪಿಸುತ್ತಾ ಭೂಮಿ, ನೇತ್ರಾವತಿ ನದಿ ಅಪಹರಣ ಮಾಡುವ ಮೂಲಕ ರಾವಣ ರಾಜ್ಯ ನಿರ್ಮಾಣ ಮಾಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಸುಮಾರು 80 ಸಾವಿರ ಲಾರಿಗಳಿಗೆ ಮರಳು ಸಾಗಾಟದ ಪರ್ಮಿಟ್ ನೀಡಲಾಗಿದೆ ಎನ್ನಲಾಗಿದ್ದು, ಇದರಲ್ಲಿಯೂ ಅವ್ಯವಹಾರ ನಡೆದಿದೆ. 10 ಚಕ್ರದ ಲಾರಿ ಸಂಚಾರದಿಂದ ರಸ್ತೆ ಸಂಪೂರ್ಣ ಕೆಟ್ಟು ಹೋಗುತ್ತಿದ್ದು, ಈ ಬಗ್ಗೆ ಶೀಘ್ರ ಕ್ರಮಕ್ಕೆ ಮುಂದಾಗದಿದ್ದಲ್ಲಿ ಎಲ್ಲಾ ಲಾರಿಗಳನ್ನು ಸ್ವತಹಾಃ ತನೇ ತಡೆದು ಪ್ರತಿಭಟಿಸಲಾಗುವುದು ಎಂದರು.
 ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ 5 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 5 ಸ್ಥಾನಗಳನ್ನು ಬಹುಮತಗಳಿಂದ ಗೆಲ್ಲಳಿದೆ ಎಂದರು.

ಕೇಂದ್ರದ ಕುಳಾಯಿ ಜಟ್ಟಿ, ಮುಲ್ಕಿ _ ಮೂಡಬಿರೆ ದ್ವಿಪಥ ರಾಜ್ಯ ಹೆದ್ದಾರಿ ಸೇರಿದಂತೆ ಕೇಂದ್ರದ ಹಲವು ಯೋಜನೆಗಳು ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಯೋಜನೆಗಳನ್ನು ಈಗಿನ ರಾಜ್ಯ ಸರಕಾರದ ಯೋಜನೆಗಳೆಂದು ಕಾಂಗ್ರೆಸ್ ವ್ಯವಸ್ಥಿತವಾಗಿ ಬಿಂದಿಸುತ್ತಿದೆ ಎಂದು ಆರೋಪಿಸಿದರು.
 

94 ಸಿಸಿ ಯಲ್ಲಿ ಕಾಂಗ್ರೆಸ್ ತನ್ನ ಧ್ವಜದ ಕೆಳಗೆ ಚೆಕ್‌ಗಳನ್ನು ವಿತರಿಸುವ ಮೂಲಕ ರಾಜಕೀಯ ಮಾಡುತ್ತಿದೆ ಎಂದು ನಳಿನ್ ಕುಮಾರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಮಾನಾಥ ಕೋಟ್ಯಾನ್, ಜಗಧೀಶ ಅಧಿಕಾರಿ, ಈಶ್ವರ್ ಕಟೀಲ್, ಕಸ್ತೂರಿ ಪಂಜ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News