ಕೋಟೆಬಾಗಿಲು ಸ.ಹಿ.ಪ್ರಾ ಶಾಲೆಯ ವಾರ್ಷಿಕೋತ್ಸವ, ಕಲಾ ಮಂಟಪ ಉದ್ಘಾಟನೆ
ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಕೋಟೆಬಾಗಿಲು (ಜನರಲ್) ಇವುಗಳ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಹಳೆ ವಿದ್ಯಾರ್ಥಿ ಸಂಘದ ದಶಮಾನೋತ್ಸವದಂಗವಾಗಿ ನಿರ್ಮಾಣಗೊಂಡಿರುವ ಕಲಾ ಮಂಟಪ (ದಿ. ಶಿವರಾಜ ರೈ ವೇದಿಕೆ) ವನ್ನು ಪುರಸಭಾ ಅಧ್ಯಕ್ಷೆ ರೂಪಾ.ಎಸ್ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು.
ವಾರ್ಷಿಕೋತ್ಸವದಂಗವಾಗಿ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸಭಾಧ್ಯಕ್ಷರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕ ಸುಧಾಕರ ಸಾಲ್ಯಾನ್ ಬಿ.ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯಲ್ಲಿ ಈಗ ಇರುವ ಕೆಲವು ಪೀಠೋಪಕರಣಗಳು ನಾದುರಸ್ತಿಯಲ್ಲಿದೆ ಹಾಗೂ ಬಿಸಿಯೂಟದ ವ್ಯವಸ್ಥೆ ಇದ್ದು ಪುರಸಭೆಯ ನೀರು ಸಾಕಾಗುವುದಿಲ್ಲ. ಶಾಲೆಗೆ ಶಾಶ್ವತವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುವಂತೆ ವಿನಂತಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪುರಸಭಾ ಸದಸ್ಯೆ ರಮಣಿ ಧ್ವಜರೋಹಣಗೈದರು. ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸಕ್ರಮ-ಸಕ್ರಮ ಸದಸ್ಯ ಪಿ.ಕೆ.ಥೋಮಸ್, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್, ರಾಜೇಶ್ ಕೋಟೆಕಾರ್, ಉದ್ಯಮಿಗಳಾದ ರಮೇಶ್ ರಾವ್, ಪ್ರೇಮನಾಥ ಮಾರ್ಲ, ಸಿಆರ್‌ಪಿ ಕಮಲಾಕ್ಷ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ವಿಶ್ವನಾಥ ಕೋಟ್ಯಾನ್, ರಮಾನಂದ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವರದಿ ವಾಚಿಸಿದರು.ಅಂಗನವಾಡಿ ಶಿಕ್ಷಕಿ ಬಹುಮಾನಿತರ ಹೆಸರುಗಳನ್ನು ವಾಚಿಸಿದರು.