×
Ad

ಹೊಯ್ಗೆ ಬಝಾರ್ ನಲ್ಲಿ ಬೆಂಕಿ ಅನಾಹುತ

Update: 2016-01-08 19:09 IST

ಮಂಗಳೂರು, ಜ.8: ಹೊಯ್ಗೆ ಬಝಾರ್‌ನಲ್ಲಿ ತಮಿಳುನಾಡಿನ ಕುಟುಂಬವೊಂದು ವಾಸಿಸುತ್ತಿದ್ದ ಶೆಡ್‌ವೊಂದಕ್ಕೆ ಬೆಂಕಿ ತಗುಲಿ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಬೆಂಕಿ ಅವಘಡದ ಸಂದರ್ಭದಲ್ಲಿ ಶೆಡ್‌ನಲ್ಲಿ ನಾಲ್ಕು ಮಂದಿ ಇದ್ದರೆಂದು ಹೇಳಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶೆಡ್‌ನಲ್ಲಿದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಮೀನುಗಾರಿಕೆ ವೃತ್ತಿಯ ಈ ಕುಟುಂಬವು ಕಳೆದ ಕೆಲವು ತಿಂಗಳುಗಳಿಂದ ಹೊಗೆಬಝಾರ್‌ನ ಶೆಡ್‌ವೊಂದರಲ್ಲಿ ವಾಸಿಸುತ್ತಿದೆ. ಮೀನುಗಾರಿಕೆಗೆಂದು ಒಟ್ಟು ಮಾಡಿದ್ದ ಸುಮಾರು ಒಂದು ಲಕ್ಷ ನಗದು ಮತ್ತು ಮೀನುಗಳ ಸಹಿತ ಮನೆಯ ಉಪಕರಣಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News