ಈಸ್ಟ್-ವೆಸ್ಟ್ ಮೆಟ್ರೋ 2018ರಲ್ಲಿ ಕಾರ್ಯಾರಂಭ ಸಾಧ್ಯತೆ: ಪ್ರಭು
Update: 2016-01-08 23:39 IST
ಹೌರಾ,ಜ.8: ಈಸ್ಟ್-ವೆಸ್ಟ್(ಪೂರ್ವ-ಪಶ್ಚಿಮ) ಮೆಟ್ರೋ ಯೋಜನೆಗಿದ್ದ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶುಕ್ರವಾರ ಇಲ್ಲಿ ಹೇಳಿದ ರೈಲ್ವೆ ಸಚಿವ ಸುರೇಶ ಪ್ರಭು ಅವರು, ಮೆಟ್ರೋ ಸೇವೆ 2018,ಜೂನ್ ವೇಳೆಗೆ ಕಾರ್ಯಾರಂಭಗೊಳ್ಳುತ್ತದೆ ಎಂದು ಆಶಯ ವ್ಯಕ್ತಪಡಿಸಿದರು. ಹೌರಾ ನಿಲ್ದಾಣದಲ್ಲಿ ಆಗ್ನೇಯ ರೈಲ್ವೆಯ ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡುತ್ತಿದ್ದ ಅವರು, ಸ್ವಚ್ಛ ವಾತಾವರಣಕ್ಕಾಗಿ ಇಂಗಾಲದ ಪ್ರಮಾಣವನ್ನು ತಗ್ಗಿಸಲು ನಿಲ್ದಾಣಗಳಲ್ಲಿ ಮತ್ತು ಮೆಟ್ರೋ ರೈಲು ಬೋಗಿಗಳಲ್ಲಿ ಹಸಿರು ಶಕ್ತಿ ಉಪಕ್ರಮಗಳನ್ನು ಪ್ರಕಟಿಸಿದರು.