×
Ad

ರಬ್ಬರ್ ಸ್ಮೋಕ್‌ಹೌಸ್‌ಗೆ ಬೆಂಕಿ

Update: 2016-01-08 23:57 IST

 ಸುಳ್ಯ, ಜ.8: ರಬ್ಬರ್ ಸ್ಮೋಕ್‌ಹೌಸ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಸಮೀಪದ ಕಟ್ಟಡ ಮತ್ತು ದನದ ಕೊಟ್ಟಿಗೆಗೆ ಹಾನಿಯಾದ ಘಟನೆ ಕಂದ್ರಪ್ಪಾಡಿಯಲ್ಲಿ ನಡೆದಿದೆ.

 ಕಂದ್ರಪ್ಪಾಡಿಯ ಕುಶಾಲಪ್ಪಗೌಡ ರುದ್ರಚಾಮುಂಡಿಯವರ ರಬ್ಬರ್ ಸ್ಮೋಕ್‌ಹೌಸ್‌ನಲ್ಲಿ ಜ.7ರ ತಡರಾತ್ರಿ ಬೆಂಕಿ ಹೊತ್ತಿಕೊಂಡಿತು. ಹೆಂಚು ಒಡೆಯುವ ಶಬ್ದ ಮನೆಯವರಿಗೆ ಕೇಳಿ ಎಚ್ಚರಗೊಂಡು ನೋಡಿದಾಗ ಬೆಂಕಿ ಹೊತ್ತಿ ಉರಿಯುತ್ತಿತ್ತು ಎನ್ನಲಾಗಿದೆ. ಸ್ಥಳೀಯರ ಸಹಕಾರದಿಂದ ಹಟ್ಟಿಯಿಂದ ದನ ಕರುಗಳನ್ನು ಹೊರಗೆ ಹಾಕಿ ಬೆಂಕಿ ನಂದಿಸಲಾಯಿತು. ರಬ್ಬರ್ ಸ್ಮೋಕ್‌ಹೌಸ್‌ನಲ್ಲಿ ಸಂಗ್ರಹಿಸಿ ಡಲಾಗಿದ್ದ 2.5 ಕ್ವಿಂಟಾಲ್ ಸ್ಕಾಪ್ ಮತ್ತು 5 ಕ್ವಿಂಟಾಲ್ ರಬ್ಬರ್ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News