ಕಿನ್ನಿಗೋಳಿ ಗ್ರಾಪಂನಲ್ಲಿ ಅಕ್ರಮ: ಆರೋಪ
Update: 2016-01-09 00:05 IST
ಮಂಗಳೂರು, ಜ.8: ಕಿನ್ನಿಗೋಳಿ ಗ್ರಾಪಂಗೆ ಸಂಬಂಧಿಸಿದ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ನಿಯಮದಂತೆ ವಿಲೇವಾರಿ ಮಾಡದೆ ಅಕ್ರಮ ನಡೆಸಿರುವುದಾಗಿ ಕಿನ್ನಿಗೋಳಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶ್ರೀಧರ್ ಶೆಟ್ಟಿ ಆರೋಪಿಸಿದ್ದಾರೆ.
ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿನ್ನಿಗೋಳಿ ಪೇಟೆಯಲ್ಲಿ ಮಾರುಕಟ್ಟೆಯ ಅಂಗಡಿಗಳನ್ನು ಪುನರ್‌ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಪಂಚಾಯತ್ ರಾಜ್ ಕಾನೂನನ್ನು ಉಲ್ಲಂಘಿಸಲಾಗಿದೆ. ರೈತರ 5 ಅಂಗಡಿಗಳನ್ನು ಗ್ರಾಪಂ ಪಿಡಿಒ ಎತ್ತಂಗಡಿ ಮಾಡಿದ್ದಾರೆ. ಅಂಗಡಿಗಳಲ್ಲಿದ್ದ ಸಾಮಾನುಗಳನ್ನು ಒಯ್ದಿದ್ದು ಈವರೆಗೂ ಹಸ್ತಾಂತರಿಸಿಲ್ಲ. ಅಲ್ಲದೆ ರೈತರಿಗೆ ಸೇರಿದ ಅಂಗಡಿಗಳ ಬಗ್ಗೆ ಸರಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂನಲ್ಲಿ ನಡೆದ ವ್ಯವಹಾರಗಳ ಬಗ್ಗೆ ದಕ ಜಿಪಂ ಹಾಗೂ ತಾಪಂಗೂ ದಾಖಲೆ ಸಹಿತ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.