×
Ad

ಕಾಸರಗೋಡು: ಮನೆಯಲ್ಲಿ ಕಳ್ಳತನ

Update: 2016-01-09 00:09 IST

ಕಾಸರಗೋಡು, ಜ.8: ಇಲ್ಲಿನ ಚೌಕಿ ಸಮೀಪದ ಆಝಾದ್ ನಗರದ ನಿವಾಸಿ ಗಲ್ಫ್ ಉದ್ಯೋಗಿ ಅಬ್ದುರ್ರಹ್ಮಾನ್‌ನ ಮನೆಗೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ 1 ಸಾವಿರ ರೂ. ಕಳವುಗೈದ ಬಗ್ಗೆ ವರದಿಯಾಗಿದೆ.

  ಅಬ್ದುರ್ರಹ್ಮಾನ್ ಕುಟುಂಬ ದುಬೈಯಲ್ಲಿ ನೆಲೆಸಿದೆ. ಈ ಮನೆಯ ಉಸ್ತುವಾರಿಯನ್ನು ಸಂಬಂಧಿಕರು ನೋಡುತ್ತಿದ್ದರು ಎನ್ನಲಾಗಿದೆ. ಮನೆಯ ಹಿಂಬಾಗಿಲು ಮುರಿದ ಕಳ್ಳರು ಕಪಾಟುಗಳನ್ನು ಒಡೆದಿದ್ದು, ಬೆಲೆಬಾಳುವ ವಸ್ತುಗಳು ಲಭಿಸದೆ ಕಾಣಿಕೆ ಡಬ್ಬಿಯಲ್ಲಿದ್ದ ಹಣ ಕಳವುಗೈದಿದ್ದಾರೆ. ಈ ಬಗ್ಗೆ ಮುಜೀಬ್ ಎಂಬವರು ನಗರ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News