×
Ad

ಕೆಎಸ್ಸಾರ್ಟಿಸಿಯಲ್ಲಿ ಉದ್ಯೋಗಾವಕಾಶ

Update: 2016-01-09 00:09 IST

ಮಂಗಳೂರು, ಜ.8: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಆವಶ್ಯವಿರುವ ದರ್ಜೆ-3ರ ಕುಶಲಕರ್ಮಿ, ತಾಂತ್ರಿಕ ಸಹಾಯಕ, ಸಹಾಯಕ ಉಗ್ರಾಣ ರಕ್ಷಕ, ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ ಮತ್ತು ಅಂಕಿಅಂಶ ಸಹಾಯಕ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರಾರಸಾ ನಿಗಮದ ವೆಬ್ ಸೈಟ್:  www.ksrtcjobs.comರಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 4 ಕೊನೆಯಾಗಿದ್ದು, ಅರ್ಜಿ ಶುಲ್ಕ ಪಾವತಿಗೆ ಫೆ.6 (ಅಂಚೆ ಕಚೇರಿ ಸಮಯದಲ್ಲಿ) ಕೊನೆಯ ದಿನವಾಗಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News