ಪ್ರಜಾಪ್ರಭುತ್ವದ ವೌಲ್ಯಗಳನ್ನು ಉಳಿಸುವುದು ಪತ್ರಿಕೆಗಳ ಹೊಣೆಗಾರಿಕೆ: ಡಾ.ದ್ವಾರಕನಾಥ್
‘ಪ್ರಜಾಪ್ರಭುತ್ವ ಮತ್ತು ಮಾಧ್ಯಮ’ ವಿಚಾರಗೋಷ್ಠಿ
ಮಂಗಳೂರು, ಜ.8: ಪ್ರಜಾಪ್ರಭುತ್ವದ ವೌಲ್ಯಗಳನ್ನು ಉಳಿಸಿಕೊಳ್ಳುವುದು ಜನ ಸಾಮಾನ್ಯರ ಪತ್ರಿಕೆಯ ಹೊಣೆಗಾರಿಕೆ ಯಾಗಿದೆ ಎಂದು ಹಿಂದುಳಿದ ವರ್ಗ ಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ತಿಳಿಸಿ ದ್ದಾರೆ.
ಅರು ನಗರದ ಜಮೀಯ್ಯತು್ ಫಲಾಹ್ ಸಭಾಂಗಣದಲ್ಲಿ ‘ಪ್ರಸ್ತುತ’ ಪಾಕ್ಷಿಕದ 10ನೆ ವರ್ಷಾಚರಣೆ ಅಂಗವಾಗಿ ‘ಪ್ರಜಾಪ್ರಭುತ್ವ ಮತ್ತು ಮಾಧ್ಯಮ’ ವಿಚಾರಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳಿಗೆ ಜನಸಾಮಾನ್ಯರ ಧ್ವನಿಯನ್ನು ಬಿಂಬಿಸಲು ಅವಕಾಶ ನೀಡಬೇಕಾಗಿದೆ. ರಾಜ್ಯದಲ್ಲಿ ಲಂಕೇಶ್ ಪತ್ರಿಕೆಯ ಕಾಲದಲ್ಲಿ ಈ ರೀತಿಯ ಅಭಿವ್ಯಕ್ತಿಗೆ ಪತ್ರಿಕೆ ತನ್ನನ್ನು ತೆರೆದುಕೊಂಡಿತ್ತು. ಆದರೆ ಪ್ರಸಕ್ತ ಬದಲಾದ ವಾತಾವರಣದಲ್ಲಿ ಮಾಧ್ಯಮಗಳಲ್ಲಿ ತಳಸಮುದಾಯದ ಪ್ರಾತಿನಿಧ್ಯ ಕಡಿಮೆ ಇದೆ. ಪ್ರಚೋದನಕಾರಿ ವರದಿಗಳು ಪ್ರಕಟವಾಗುತ್ತಿರುವುದನ್ನು ಕಂಡಾಗ ಮಾಧ್ಯಮಗಳು ಪ್ರಜಾಪ್ರಭುತ್ವದ ಕೈಯಲ್ಲಿವೆಯೇ? ಎಂದು ಸಂದೇಹ ಪಡುವಂತಾಗಿದೆ ಎಂದರು.
ಗೋಮಾಂಸದ ಹೆಸರಿನಲ್ಲಿ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಲಾಗಿದೆ. ಭಾರತ ದಲ್ಲಿ ಬ್ರಾಹ್ಮಣರು ಸೇರಿದಂತೆ ಗೋಮಾಂಸ ಭಕ್ಷಣೆ ಈ ನೆಲದ ಮೂಲನಿವಾಸಿಗಳ ಆಹಾರ ಪದ್ಧತಿಯಾಗಿತ್ತು ಎನ್ನುವ ಸತ್ಯವನ್ನು ಮರೆಮಾಚುತ್ತಿರುವುದು ವೈದಿಕಶಾಹಿಯ ತಂತ್ರ. ಈ ಸತ್ಯಗಳನ್ನು ಮಾಧ್ಯಮಗಳು ಬಹಿ ರಂಗ ಪಡಿಸಬೇಕಾಗಿದೆ. ಜನಪರ ಕಾಳಜಿ ಹೊಂದಿರುವ, ನ್ಯಾಯಪರವಾಗಿರುವ ಮಾಧ್ಯಮಗಳು ಇನ್ನಷ್ಟು ಹುಟ್ಟಿಬರಲಿ. ಮಾಧ್ಯಮಗಳು ಮಾನವೀಯ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಳ್ಳಬಾರದು. ಪತ್ರಿಕೆಗಳು ಮತ್ತು ಚಳವಳಿಗಳು ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಪತ್ರಿಕೆಗಳು, ಮಾಧ್ಯಮಗಳು ವೌಢ್ಯವನ್ನು ಬಿತ್ತುವ ಕೆಲಸ ಮಾಡಬಾರದು. ಪ್ರಾಚೀನ ಘಟನೆಗಳು ವೌಢ್ಯದಿಂದ ಕೂಡಿದ್ದರೆ ಅದರ ವಿರುದ್ಧ ಪತ್ರಿಕೆಗಳು ಜಾಗೃತಿ ಮೂಡಿಸಬೇಕಾಗಿದೆ. ವೌಢ್ಯ ವಿರೋಧಿ ಕಾಯ್ದೆ ಜಾರಿಯಾಗಲು ಬಲ ನೀಡಬೇಕಾಗಿದೆ. ರಾಜಕಾರಣಿಗಳ ತಪ್ಪುಗಳನ್ನು ಬಯಲಿಗೆಳೆಯಬೇಕಾಗಿದೆ. ಮಾಧ್ಯಮಗಳು ನ್ಯಾಯದ ಪರ ನಿಲ್ಲಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಎಂಪವರ್ ಇಂಡಿಯಾದ ಅಧ್ಯಕ್ಷ ಎ.ಎಂ.ಅಬ್ದುರ್ರಹ್ಮಾನ್ ವಹಿಸಿದ್ದರು. ದೇಶದಲ್ಲಿ ಎಲ್ಲರಿಗೂ ಆರೋಗ್ಯ ಭದ್ರತೆ, ಜೀವಭದ್ರತೆ ಇಲ್ಲದಿರುವಾಗ ಈ ದೇಶದಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವದ ಬಗ್ಗೆಯೇ ಸಂದೇಹಪಡುವಂತಾಗಿದೆ. ಪ್ರಸಕ್ತ ಪ್ರಜಾಪ್ರಭುತ್ವದಲ್ಲಿ ಮೂಲಭೂತ ವಾದಿಗಳು, ಜಾತಿವಾದಿಗಳು, ಮಾರುಕಟ್ಟೆ ಶಕ್ತಿಗಳು ಬಲಗೊಳ್ಳುತ್ತಿದೆ. ಜನರಿಂದ ದೂರವಾಗುತ್ತಿರುವ ಪ್ರಜಾಪ್ರಭುತ್ವವನ್ನು ಜನರ ನಡುವೆ ಪುನರ್ ಸ್ಥಾಪಿಸಬೇಕಾಗಿದೆ ಎಂದು ಮೈಸೂರು ಸಮೂಹ ಸಂವ ಹನ ವಿಭಾಗದ ಮಾಧ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಮಹೇಶ್ ಚಂದ್ರಗುರು ತಿಳಿಸಿದ್ದಾರೆ.
ಮಹಿಳಾ ಹೋರಾಟಗಾರ್ತಿ ಶಾಹಿದಾ ತಸ್ನೀಂ ಮಾತನಾಡುತ್ತಾ, ದೇಶದಲ್ಲಿ ಮಹಿಳೆ ಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಹಲವಾರು ಪ್ರಕರಣಗಳಲ್ಲಿ ಅಪರಾಧಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ಪ್ರಮುಖ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಲು ಪ್ರಯತ್ನಿಸಬೇಕಾಗಿದೆ ಎಂದರು.
ಇಲ್ಯಾಸ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಕಕ್ಕಿಂಜೆ ವಂದಿಸಿದರು.
ಮಾರ್ಕಂಡೇಯ ಕಾಟ್ಜು ಸಂದೇಶ: ಪ್ರಸ್ತುತ 10ನೆ ವರ್ಷದ ಕಾರ್ಯಕ್ರಮಕ್ಕೆ ವೈಯಕ್ತಿಕ ಕಾರಣಗಳಿಗಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನಲು ವಿಷಾದಿಸುತ್ತೇನೆ. ಭಾರತದ ಜಾತ್ಯತೀತ ವೌಲ್ಯ ನೆಲೆ ಗಳನ್ನು ಉಳಿಸಿಕೊಳ್ಳುವ ತಮ್ಮ ಪ್ರಯತ್ನ ಜಾರಿಯಲ್ಲಿರಲಿ ಎಂಬ ನಿವೃತ್ತ ನ್ಯಾಯ ಮೂರ್ತಿ, ಸುಪ್ರೀಂಕೋರ್ಟ್‌ನ ನಿಕಟ ಪೂರ್ವ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಸಂದೇಶವನ್ನು ಸಂಘಟಕರು ಸಭೆಯಲ್ಲಿ ವಾಚಿಸಿದರು.