ಇಂದು ‘ಹೊಸ ವರ್ಷದ ಪ್ರಶಸ್ತಿ’ ಪ್ರದಾನ
Update: 2016-01-09 00:27 IST
ಮಣಿಪಾಲ, ಜ.8: ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ವಿವಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಪ್ರತಿ ವರ್ಷ ನೀಡುವ ‘ಹೊಸ ವರ್ಷದ ಪ್ರಶಸ್ತಿ’ಗೆ ಉಡುಪಿಯ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ಡಾ.ಜಿ.ಶಂಕರ್, ಬೆಂಗಳೂರಿನ ಮಣಿಪಾಲ ಹಾಸ್ಪಿಟಲ್‌ನ ಅಧ್ಯಕ್ಷ ಡಾ.ಎಚ್.ಸುದರ್ಶನ ಬಲ್ಲಾಳ್, ಮಂಗಳೂರಿನ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ಎಂಡಿ ಅಲೆನ್ ಸಿ.ಎ.ಪೆರೇರ ಹಾಗೂ ಲೇಖಕ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಆಯ್ಕೆಯಾಗಿದ್ದು, ಜ.9ರಂದು ಸಂಜೆ 5:30ಕ್ಕೆ ಮಣಿಪಾಲದ ಹೊಟೇಲ್ ಫಾರ್ಚ್ಯೂನ್ ಇನ್ ವ್ಯಾಲಿವ್ಯೆನ ಚೈತ್ಯಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾ ಗುವುದು ಎಂದು ಪ್ರಕಟನೆ ತಿಳಿಸಿದೆ.