×
Ad

ವಿಟ್ಲ-ಮಂಗಳೂರು: ಬಸ್ ಟಿಕೆಟ್ ದರ ಕಡಿತ

Update: 2016-01-09 00:30 IST

ಮಂಗಳೂರು, ಜ.8: ಸಾರ್ವಜನಿಕರಿಗೆ ಹೊಸ ವರ್ಷದ ಕೊಡುಗೆಯಾಗಿ ವಿಟ್ಲ-ಮಂಗಳೂರು, ಸ್ಟೇಟ್‌ಬ್ಯಾಂಕ್ ನಡುವೆ ಸಂಚರಿಸುತ್ತಿರುವ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಟಿಕೆಟ್ ದರವನ್ನು ಕಡಿಮೆ ಮಾಡಲಾಗಿದೆ.

ವಿಟ್ಲ-ಮಂಗಳೂರು/ಸ್ಟೇಟ್‌ಬ್ಯಾಂಕ್-ರೂ.30(ಹಳೆದರ 33), ವಿಟ್ಲ-ಬಿ.ಸಿ.ರೋಡ್ - ರೂ.20( ಹಳೆದರ 21), ವಿಟ್ಲ-ಕಲ್ಲಡ್ಕ- ರೂ.15( ಹಳೆದರ 18) ಹಾಗೂ ವಿಟ್ಲ-ಗೋಳ್ತಮಜಲು- ರೂ.13( ಹಳೆದರ 15). ನೂತನ ದರ ಜ.1ರಿಂದಲೇ ಜಾರಿಗೆ ಬಂದಿದೆ ಎಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News