×
Ad

ಗಲ್ಫ್ ಉದ್ಯೋಗಿಯ ಮನೆಗೆ ನುಗ್ಗಿ ಕಳವಿಗೆ ಯತ್ನ

Update: 2016-01-09 09:04 IST

ಕಾಸರಗೋಡು: ಗಲ್ಫ್ ಉದ್ಯೋಗಿಯ  ಮನೆಯೊಂದಕ್ಕೆ ನುಗ್ಗಿದ  ಕಳ್ಳರು  ಕಳವಿಗೆತ್ನಿಸಿದ ಘಟನೆ ನಗರ ಟಾಣಾ ವ್ಯಾಪ್ತಿಯ  ಚೌಕಿ ಯಲ್ಲಿ  ನಡೆದಿದೆ .

ಆಜಾದ್ ನಗರದ ಅಬ್ದುಲ್ ರಹಮಾನ್ ಎಂಬವರ ಮನೆಯಲ್ಲಿ  ಈ ಕೃತ್ಯ  ನಡೆದಿದೆ. ಅಬ್ದುಲ್ ರಹಮಾನ್ ಕುಟುಂಬ  ದುಬೈ ಯಲ್ಲಿ ನೆಲೆಸಿದೆ . ಈ ಮನೆಯನ್ನು ಸಂಬಂಧಿಕರು  ನೋಡುತ್ತಿದ್ದರು . ಜನವರಿ ಐದರ ಬಳಿಕ ಈ ಕೃತ್ಯ ನಡೆದಿದೆ  ಎನ್ನಲಾಗಿದೆ ಈ ಕುರಿತು ಸಂಬಂಧಿಕ ಮುಜೀಬ್ ನಗರ ಟಾಣಾ ಪೊಲೀಸರಿಗೆ ದೂರು ನೀಡಿದ್ದಾರೆ .

ಮನೆಯ ಹಿಂಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದು , ಕಪಾಟುಗಳನ್ನು  ಒಡೆದಿದ್ದು , ಯಾವುದೇ ಮೌಲ್ಯದ ವಸ್ತುಗಳು ಲಭಿಸದೆ ಇದ್ದುದರಿಂದ  ಕಾಣಿಕೆ ಡಬ್ಬಿಯಲ್ಲಿದ್ದ  ಒಂದು ಸಾವಿರ ರೂ . ನಷ್ಟು ಹಣವನ್ನು ಕದ್ದೊಯ್ದಿರುವುದಾಗಿ ದೂರಿನಲ್ಲಿ ತಿಳಿಸಿದ್ದು , ಪೊಲೀಸರು ತನಿಖೆ ನಡೆಸುತ್ತಿದ್ದಾರೆ .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News