×
Ad

ಜನವರಿ 10 ; ಬೋಳಂತೂರು ಎನ್.ಸಿ.ರೋಡ್ ನಲ್ಲಿ ' ಹುಬ್ಬುನ್ನಬಿ ' ಕಾರ್ಯಕ್ರಮ

Update: 2016-01-09 13:26 IST

ಬಂಟ್ವಾಳ:  ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ ಜಿಲ್ಲೆ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೋಳಂತೂರು ವಲಯ ಇದರ ವತಿಯಿಂದ 
ಹುಬ್ಬುನ್ನೆಬಿ ಅಭಿಯಾನದ ಅಂಗವಾಗಿ ಪ್ರವಾದಿ (ಸ.ಅ.) ಜೀವನ  ಸಂದೇಶ ಕಾರ್ಯಕ್ರಮವು ಜನವರಿ 10 ರಂದು ಸಂಜೆ  ಬೋಳಂತೂರು ಎನ್.ಸಿ.ರೋಡ್ ಎಂಬಲ್ಲಿ ನಡೆಯಲಿದೆ.

ಇಮಾಮ್ಸ್ ಕೌನ್ಸಿಲ್ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಇಮಾಮ್ ಕೌನ್ಸಿಲ್ ಉಪಾಧ್ಯಕ್ಷ  ಆತೂರ್ ಇಬ್ರಾಹಿಮ್ ಆಲ್ ಹಾದಿ ತಂಙಳ್ ಉಧ್ಘಾಟಿಸಲಿದ್ದು, ಜ಼ಾಪರ್ ಸಾದೀಕ್ ಫೈಝಿ ಮತ್ತು ಅನ್ವರ್ ಸಾದಾತ್ ಗೂಡಿನಬಳಿ ಸಂದೇಶ ನೀಡಲಿದ್ದಾರೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News