×
Ad

ಜ 10; ದೇರಳಕಟ್ಟೆಯಲ್ಲಿ ‘ದಿ ಚಿಕನ್ ಬೇ ’ ರೆಸ್ಟೋರೆಂಟ್ ಶುಭಾರಂಭ

Update: 2016-01-09 19:23 IST

    ಮಂಗಳೂರು,ಜ.9: ದೇರಳಕಟ್ಟೆ ನೀಲಗಿರಿಸ್ ಸಮೀಪದ ಹಜ್ಜಾಜ್ ಕಾಂಪ್ಲೆಕ್ಸ್ ನಲ್ಲಿ ಆರಂಭವಾಗಲಿರುವ ಕೆಫೆ ಮಂಡೊಲಿಸ್ ಅವರ ‘ದಿ ಚಿಕನ್ ಬೇ’ ರೆಸ್ಟೋರೆಂಟ್ ಜ.10ರಂದು ಸಂಜೆ 6 .30 ಗಂಟೆಗೆ ಶುಭಾರಂಭಗೊಳ್ಳಲಿದೆ.

  ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ರೆಸ್ಟೋರೆಂಟ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಫೆ ಮಂಡೋಲಿಸ್-ದಿ ಚಿಕನ್ ಬೇ ಇದರ ಚೇರ್‌ಮೆನ್ ಶಬೀರ್ ಮಂಡೋಲಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರೋಗ್ಯ ಸಚಿವ ಯು.ಟಿ. ಖಾದರ್, ಶಾಸಕ ಮೊಯಿದಿನ್ ಬಾವ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಕಣಚೂರು ಗ್ರೂಪ್ ಆಫ್ ಕಂಪೆನಿಸ್ ಇದರ ಚೇರ್‌ಮೆನ್ ಯು. ಕೆ. ಮೋನು ಕಣಚೂರು, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದ.ಕ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬೆಳ್ಮ ಗ್ರಾ.ಪಂ. ಅಧ್ಯಕ್ಷ ವಿಜಯ ಕೆ , ಕೆಫೆ ಮಂಡೊಲಿಸ್ ಅವರ ‘ದಿ ಚಿಕನ್ ಬೇ’ ಪಾಲುದಾರರಾದ ಅಬ್ದುಲ್ ನಾಸೀರ್, ಅಬ್ದುಲ್ ಜಲೀಲ್, ಮೊಹಮ್ಮದ್ ಇಮ್ರಾನ್ ಭಾಗವಹಿಸಲಿದ್ದಾರೆ.

  ಕೆಫೆ ಮಂಡೊಲೀಸ್ ಅವರ ‘ದಿ ಚಿಕನ್ ಬೇ’ ರೆಸ್ಟೋರೆಂಟ್‌ನಲ್ಲಿ ಟಿಸಿಬಿ ಗ್ರಿಲ್ ಬರ್ಗರ್, ಕ್ರಂಚಿ ಚಿಕನ್ ಬರ್ಗರ್, ಜ್ಯೂಸಿ ಗ್ರಿಲ್ ಬರ್ಗರ್, ವೆಜ್ ಆ್ಯಂಡ್ ಚೀಸಿ ಬರ್ಗರ್, ಗೊ-ಗ್ರೀನ್ ಬರ್ಗರ್, ಚಿಕ್ - ಓ -ವ್ಯ್ರಾಪ್, ಸ್ಯಾಫ್ರೋನ್ ರೈಸ್ ವಿದ್ ಪಾಪ್ ಚಿಕ್, ಗ್ರಿಲ್‌ಲ್ಡ್ ಚಿಕನ್ ಬೋನ್‌ಲೆಸ್, ವೆಜ್ಜಿ ಪಾಸ್ತಾ (ರೆಡ್ ಆ್ಯಂಡ್ ವೈಟ್) ಮುಂತಾದ ತಿನಿಸುಗಳು ಇಲ್ಲಿ ಲಭ್ಯವಿರುವುದು.ಇಲ್ಲಿನ ಆಹಾರ ಪದಾರ್ಥಗಳಲ್ಲಿ ಯಾವುದೆ ಬಣ್ಣಗಳನ್ನು ಬಳಸದೆ ತಯಾರಿಸಲಾಗಿದ್ದು ತಿನಿಸುಗಳು ಸ್ವಾದಿಷ್ಟಕರವಾಗಿದೆ. ಆಹಾರ ಪದಾರ್ಥಗಳನ್ನು ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆಯು ಲಭ್ಯವಿದೆ. ಕೆಫೆ ಮಂಡೊಲಿಸ್ ಅವರ ‘ದಿ ಚಿಕನ್ ಬೇ’ ಮುಂದಿನ ದಿನಗಳಲ್ಲಿ ಕಂಕನಾಡಿ, ಅತ್ತಾವರ, ಮಣಿಪಾಲ ಮುಂತಾದೆಡೆಗಳಲ್ಲಿ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News