×
Ad

ಉ.ಕೊರಿಯ ಅಣು ಪರೀಕ್ಷೆ: ದ.ಕೊರಿಯ ಸಂಸತ್‌ನಲ್ಲಿ ಖಂಡನಾ ನಿರ್ಣಯ

Update: 2016-01-09 23:37 IST

ಸಿಯೋಲ್, ಜ.9: ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯ(ಡಿಪಿಆರ್‌ಕೆ) ಇತ್ತೀಚೆಗೆ ನಡೆಸಿರುವ ನಾಲ್ಕನೆಯ ಪರಮಾಣು ಪರೀಕ್ಷೆಯನ್ನು ಖಂಡಿಸಿ ದಕ್ಷಿಣ ಕೊರಿಯದ ಸಂಸತ್ ಶುಕ್ರವಾರ ನಿರ್ಣಯವೊಂದನ್ನು ಅಂಗೀಕರಿಸಿದೆ.
ತನ್ನ ಪರಮಾಣು ಕಾರ್ಯಕ್ರಮವನ್ನು ಉತ್ತರ ಕೊರಿಯ ಕೈಬಿಡುವಂತೆ ಈ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.
ಉತ್ತರ ಕೊರಿಯವು ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನು ಯಶಸ್ವಿಯಾಗಿ ಕೈಗೊಂಡಿರುವುದಾಗಿ ಘೋಷಿಸಿದ ಎರಡು ದಿನಗಳ ಬಳಿಕ ದಕ್ಷಿಣ ಕೊರಿಯದ ಸಂಸತ್ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಪರಮಾಣು ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನು ರದ್ದುಪಡಿಸುವಂತೆ ದಕ್ಷಿಣ ಕೊರಿಯದ ಸಂಸದರು ಉತ್ತರ ಕೊರಿಯವನ್ನು ಆಗ್ರಹಿಸಿದ್ದಾರೆ.
ಒಂದು ವೇಳೆ ಉತ್ತರ ಕೊರಿಯವು ತನ್ನ ಪರಮಾಣು ಚಟುವಟಿಕೆಗಳನ್ನು ಮುಂದುವರಿಸಿದ್ದೇ ಆದಲ್ಲಿ ಅದು ಅಂತಾರಾಷ್ಟ್ರೀಯ ಸಮುದಾಯದಿಂದ ಪ್ರತ್ಯೇಕಗೊಳ್ಳುವುದಲ್ಲದೆ ಒತ್ತಡ ಹಾಗೂ ಬಹಿಷ್ಕಾರಗಳನ್ನು ಎದುರಿಸಬೇಕಾಗುತ್ತದೆ ಎಂದು ನಿರ್ಣಯ ಎಚ್ಚರಿಸಿದೆ.
ಪರಮಾಣು ಪದಾರ್ಥಗಳು ಹಾಗೂ ಸೌಲಭ್ಯಗಳು ಸೇರಿದಂತೆ ತನ್ನೆಲ್ಲ ಪರಮಾಣು ಕಾರ್ಯಕ್ರಮಗಳನ್ನು ರದ್ದುಪಡಿಸುವಂತೆ ನಿರ್ಣಯ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News