ವಿಕ್ಕಿ ಶೆಟ್ಟಿ ಸಹಚರರ ಸೆರೆ
Update: 2016-01-10 00:16 IST
ಮಂಗಳೂರು,ಜ.9: ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಭೂಗತ ಪಾತಕಿ ವಿಕ್ಕಿಶೆಟ್ಟಿಯ ನಾಲ್ವರು ಸಹಚರರನ್ನು ಸಿಸಿಬಿ ಪೊಲೀಸರು ಶನಿವಾರ ನಗರದ ಚಿಲಿಂಬಿಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹೊಯಿಗೆಬೈಲು ನಿವಾಸಿ ದೀಕ್ಷಿತ್ ಶೆಟ್ಟಿ (25), ಅಶೋಕ್ ನಗರ ನಿವಾಸಿ ದೀಕ್ಷಿತ್ ದೇವಾಡಿಗ ಯಾನೆ ಚಲ್ಲು (22), ಉರ್ವ ಲಾಂಗ್‌ಲೇನ್ ನಿವಾಸಿಗಳಾದ ಪ್ರವೀಣ್ ಪೂಜಾರಿ( 25) ಹಾಗೂ ಮಹೇಶ್ ಶೆಟ್ಟಿ (21) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ತಲವಾರು, ಲಾಂಗ್‌ಚೈನ್‌ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ಪೊಲೀಸರು ಆರೋಪಿಗಳನ್ನು ಉರ್ವ ಠಾಣೆಯ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.