×
Ad

ಹಾವು ಕಡಿದು ಮಹಿಳೆ ಮೃತ್ಯು

Update: 2016-01-10 00:17 IST

ಸುಬ್ರಹ್ಮಣ್ಯ, ಜ.9: ಸುಬ್ರಹ್ಮಣ್ಯ ನೂಚಿಲ ಕೊರವೆಮೂಲೆ ಸುಬ್ಬಣ್ಣ ಮಲೆಕುಡಿಯರ ಪತ್ನಿ ಮೀನಾಕ್ಷಿ (45)ವಿಷದ ಹಾವು ಕಡಿದು ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ. ಮನೆಯ ಹಿತ್ತಲಲ್ಲಿ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭ ನಾಗರಹಾವು ಕಡಿದಿದೆ ಎನ್ನಲಾಗಿದೆ. ಕಡಿತದ ವೇಳೆ ಮನೆಯಲ್ಲಿ ಒಬ್ಬರೆ ಇದ್ದರು. ಹಾವಿನ ಕಡಿತಕ್ಕೆ ಒಳಗಾದ ಅವರು ಆಯುರ್ವೇದ ಔಷಧಿ ಪಡೆದಿದ್ದಾರೆ. ಆದರೆ ಅದು ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಪತಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News