‘ಗ್ಲೋಬಲ್ ಹಾರ್ಡ್‌ವೇರ್’ ಮಳಿಗೆ ಶುಭಾರಂಭ
ಮಂಗಳೂರು, ಜ.9: ನಗರದ ಬಂದರ್‌ನ ಮಿಷನ್ ಸ್ಟ್ರೀಟ್‌ನಲ್ಲಿರುವ ಸಿಟಿವಾಕ್ ಕಟ್ಟಡದಲ್ಲಿ ಬ್ರಾಂಡೆಡ್ ಹಾರ್‌ವೇರ್ ಉತ್ಪನ್ನಗಳ ನೂತನ ಮಳಿಗೆ ‘ಗ್ಲೋಬಲ್ ಹಾರ್ಡ್‌ವೇರ್’ ಇಂದು ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಉದ್ಘಾಟಿಸಿದ ಭಂಡಾರಿ ಅಸೋಸಿಯೇಶನ್‌ನ ಆರ್ಕಿಟೆಕ್ಟ್ ಅಮರನಾಥ ಭಂಡಾರಿ ಶುಭಹಾರೈಸಿದರು.
ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಅಬ್ದುರ್ರವೂಫ್ ಪುತ್ತಿಗೆ ಮಾತನಾಡಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಗೃಹೋಪಯೋಗಿ ವಸ್ತುಗಳ ಸಂಗ್ರಹವನ್ನು ಹೊಂದಿರುವ ಗ್ಲೋಬಲ್ ಸಂಸ್ಥೆಯಿಂದ ಗ್ರಾಹಕರಿಗೆ ಇನ್ನಷ್ಟು ಸೇವೆ ಒದಗುವಂತಾಗಲಿ ಎಂದು ಶುಭ ಕೋರಿದರು.
ನಾರ್ದನ್ ಸ್ಕೈ ಪ್ರಾಪರ್ಟೀಸ್‌ನ ಸಿಇಒ ಇರೋಲ್ ಗೋಮ್ಸ್, ಸಂಸ್ಥೆಯ ಮಾಲಕ ಅಶ್ಫಾಕ್ ಅಹ್ಮದ್, ಮ್ಯಾನೇಜರ್ ಮಕ್ಸೂದ್ ಅಹ್ಮದ್, ಕಾರ್ಪೊರೇಟರ್ ಅಬ್ದುಲ್ಲತೀಫ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ನಗರದ ಪಂಪ್‌ವೆಲ್‌ನ ಗ್ಲೋಬಲ್ ಟ್ರೇಡಿಂಗ್ ಹೌಸ್, ಸಿಟಿ ಸೆಂಟರ್ ಮಾಲ್‌ನ ಗ್ಲೋಬಲ್ ಕಿಚನ್ಸ್ ಆ್ಯಂಡ್ ಇಂಟೀರಿಯರ್ಸ್ ಮತ್ತು ಇಂಡಿಯನ್ ಫ್ಲೈವುಡ್ಸ್‌ನ ಸಹ ಸಂಸ್ಥೆಯಾಗಿರುವ ಗ್ಲೋಬಲ್ ಹಾರ್ಡ್‌ವೇರ್‌ನಲ್ಲಿ ಎಲ್ಲ ರೀತಿಯ ಫಿಟ್ಟಿಂಗ್ಸ್, ಕಿಚನ್ ಬಾಸ್ಕೆಟ್ಸ್, ಬಿಡಿ ಭಾಗಗಳು, ಬಾಗಿಲು ಸಂಬಂಧಿ ಹಾರ್ಡ್‌ವೇರ್, ವಾರ್ಡ್‌ರೋಬ್ ಸ್ಲೈಡಿಂಗ್ ಫಿಟ್ಟಿಂಗ್ಸ್ ಸೇರಿದಂತೆ ಹಾರ್ಡ್‌ವೇರ್ ಸಂಬಂಧಿತ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಿವೆ. ಪಿವಿಸಿ ಶೀಟ್ಸ್, ಡೋರ್ ಹ್ಯಾಂಡಲ್ಸ್, ಕ್ಯಾಬಿನೆಟ್ ಹ್ಯಾಂಡಲ್ಸ್, ಡೋರ್ ಲಾಕ್ಸ್, ಆ್ಯಕ್ರಲಿಕ್ ಶೀಟ್, ಕಿಚನ್ ಫಿಟ್ಟಿಂಗ್ಸ್ ಮತ್ತು ಬಿಡಿಭಾಗ, ಡೋರ್ ಹಾರ್ಡ್‌ವೇರ್ಸ್, ವಿಂಡೋ ಹಾರ್ಡ್ ವೇರ್ಸ್, ವಿಂಡೊ ಲಾಕ್, ಕರ್ಟೈನ್ ಫಿಟ್ಟಿಂಗ್ಸ್, ಗ್ಲಾಸ್ ಹಾರ್ಡ್‌ವೇರ್ಸ್ ಮುಂತಾದ ಉತ್ಪನ್ನಗಳ ಸಂಗ್ರಹವನ್ನು ಹೊಂದಿವೆ.