ಕಾವ್ಯಾ ಮಾಧವನ್‌ರಿಂದ ಎಂಡೋ ಸಂತ್ರಸ್ತರಿಗೆ ನೆರವು
Update: 2016-01-10 00:21 IST
ಕಾಸರಗೋಡು, ಜ.9: ಎಂಡೋಸಲಾನ್ ಸಂತ್ರಸ್ತರಿಗೆ ಧನಸಹಾಯ ನೀಡುವ ಮೂಲಕ ಚಿತ್ರನಟಿ ಕಾವ್ಯಾ ಮಾಧವನ್ ಮಾನವೀಯತೆ ಮರೆದಿದ್ದಾರೆ. ಶನಿವಾರ ಕಾಸರಗೋಡಿಗೆ ಆಗಮಿಸಿದ ಅವರು ಜಿಲ್ಲಾಡಳಿತಕ್ಕೆ ಒಂದು ಲಕ್ಷ ರೂ.ನ ಚೆಕ್ ಹಸ್ತಾಂತರಿಸಿದರು.
ಪತ್ರಿಕಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಕಾರಿ ಪಿ.ಎಸ್.ಮುಹಮ್ಮದ್ ಸಗೀರ್ ಚೆಕ್ಕನ್ನು ಸ್ವೀಕರಿಸಿದರು. ನೀಲೇಶ್ವರ ನಗರಸಭಾ ಅಧ್ಯಕ್ಷ ಕೆ.ಪಿ. ಜಯರಾಜನ್ ಅಧ್ಯಕ್ಷತೆ ವಹಿಸಿದ್ದರು.
ಹೆಚ್ಚುವರಿ ದಂಡಾಕಾರಿ ಎಚ್. ದಿನೇಶನ್, ಉಪ ಜಿಲ್ಲಾಕಾರಿ ಡಾ.ಪಿ. ಜಯಶ್ರೀ, ಕೆ.ಕುಞಾಂಬು ನಾಯರ್, ಸಣ್ಣಿ ಜೋಸ್ೆ, ಕಾವ್ಯಾ ಮಾಧವನ್‌ರ ತಂದೆ ಮಾಧವ, ತಾಯಿ ಶ್ಯಾಮಲಾ ಮತ್ತಿತರರು ಉಪಸ್ಥಿತರಿದ್ದರು.