ಉಡುಪಿ: 1,094 ಲಾನುಭವಿಗಳಿಗೆ ಸವಲತ್ತು ವಿತರಣೆ
ಉಡುಪಿ, ಜ.9: ಅಕಾರಿಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ತಾಲೂಕು ಕಚೇರಿಗಳಲ್ಲಿ ಕಡತಗಳು ರಾಶಿ ಬಿದ್ದಿವೆ. ಅವುಗಳ ಧೂಳು ಝಾಡಿಸಿ ಹೊರತೆಗೆಯುವ ಕೆಲಸವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ. ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಶುಕ್ರವಾರ ನಡೆದ ಉಡುಪಿ ತಾಲೂಕು ಮಟ್ಟದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ, ವಿವಿಧ ಇಲಾಖೆಯಡಿ ಅರ್ಹ ಲಾನುಭವಿಗಳಿಗೆ ವಿವಿಧ ಸವಲತ್ತು, ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಒಟ್ಟು 1,094 ಲಾನುಭವಿ ಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಶಾಸಕ ಪ್ರಮೋದ್ ಮಧ್ವರಾಜ್ ಸಮಾರಂಭದ ಅಧ್ಯಕ್ಷ್ಷತೆ ವಹಿಸಿದ್ದರು.
ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೊನಿಕ ಕರ್ನೇಲಿಯೊ, ಉಡುಪಿ ನಗರಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ಜನಾರ್ದನ್ ತೋನ್ಸೆ, ಜಿಲ್ಲಾಕಾರಿ ಡಾ.ವಿಶಾಲ್ ಆರ್., ಸಿಇಒ ಪ್ರಿಯಾಂಕಾ ಮೇರಿ ್ರಾನ್ಸಿಸ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಪಿ.ಸಾಧು, ಉಡುಪಿ ತಾಪಂ ಉಪಾಧ್ಯಕ್ಷ ಗಣೇಶ್, ಜಿಪಂ ಸದಸ್ಯೆ ಐಡಾ ಗಿಬ್ಬಾ ಡಿಸೋಜ ಸಭೆಯಲ್ಲಿದ್ದರು. ತಹಶೀಲ್ದಾರ್ ಗುರುಪ್ರಸಾದ್ ಸ್ವಾಗತಿಸಿದರು.