ಕೊಣಾಜೆ: ಅಯ್ಯಪ್ಪವ್ರತಾಧಾರಿಗಳಿಂದ ಮಸೀದಿಗೆ ಭೇಟಿ
Update: 2016-01-10 00:22 IST
ಕೊಣಾಜೆ, ಜ.9: ಕೊಣಾಜೆಯ ಶಾರದಾ ನಗರದ ಶ್ರೀ ಧರ್ಮಶಾಸ ಭಕ್ತ ವೃಂದದ ಅಯ್ಯಪ್ಪವ್ರತಾಧಾರಿಗಳು ಕೋಡಿಜಾಲ್ ಜುಮಾ ಮಸೀದಿಗೆ ಬುಧವಾರ ಭೇಟಿ ನೀಡಿ ಇಲ್ಲಿನ ಹಯಾತುಲ್ ಇಸ್ಲಾಮ್ ಮದ್ರಸದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿ ಸೌಹಾರ್ದ ಮೆರೆದರು. ಈ ವೇಳೆ ಮಸೀದಿಯ ಖತೀಬ್ ಹಾಜಿ ಅಬೂಬಕರ್ ಸಖಾಫಿ, ಜೊತೆ ಕಾರ್ಯದರ್ಶಿ ರಹ್ಮಾನ್ ಕೆ.ಎಸ್., ಮುಅಲ್ಲಿಮ್ ಮುಹಮ್ಮದ್ ಸ್ವಾಲಿಹ್, ಇಬ್ರಾಹೀಂ ಎಚ್.ಎಂ., ಇಸ್ಮಾಯೀಲ್ ಕೆ.ಎಂ., ಮುಹಮ್ಮದ್ ಕೆ.ಎಂ., ಧರ್ಮಶಾಸ್ತ ಭಕ್ತವೃಂದದ ಹರೀಶ್ ಗಟ್ಟಿ ಕೊಣಾಜೆ, ವೆಂಕಟೇಶ್ ಕೊಣಾಜೆ, ಗ್ರಾಪಂ ಸದಸ್ಯ ರಾಮಚಂದ್ರ, ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್‌ನ ಅಮೀರ್ ಕೋಡಿಜಾಲ್, ಅಬ್ದುರ್ರಹ್ಮಾನ್ ಕೋಡಿಜಾಲ್, ಕೆ.ಎಂ.ಶರ್ೀ ಉಪಸ್ಥಿತರಿದ್ದರು. ಧರ್ಮಶಾಸ್ತ ಭಕ್ತವೃಂದದ ಅಯ್ಯಪ್ಪವ್ರತಧಾರಿಗಳು ಪ್ರತಿವರ್ಷವೂ ಶಬರಿಮಲೆ ಯಾತ್ರೆ ಕೈಗೊಳ್ಳುವ ಮೊದಲು ಕೋಡಿಜಾಲ್ ಮಸೀದಿಗೆ ಭೇಟಿ ನೀಡಿ ಮದ್ರಸ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸುತ್ತಾರೆ.