×
Ad

ದಂತ ಭಾಗ್ಯ: ವೆನ್ಲಾಕ್‌ನಲ್ಲಿ ತಪಾಸಣಾ ಶಿಬಿರ ಉದ್ಘಾಟನೆ

Update: 2016-01-10 00:23 IST

ಮಂಗಳೂರು, ಜ.9: ರಾಜ್ಯ ಸರಕಾರ ಜಾರಿಗೆ ತಂದಿರುವ ದಂತ ಭಾಗ್ಯ ಯೋಜನೆಯಡಿ 60 ವರ್ಷ ಮೇಲ್ಪಟ್ಟ ಬಿಪಿಎಲ್ ಪಡಿತರ ಚೀಟಿದಾರ ಹಿರಿಯ ನಾಗರಿಕರಿಗೆ ಉಚಿತ ದಂತ ಪಂಕ್ತಿಗಳನ್ನು ನೀಡುವ ನಿಟ್ಟಿನಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ಶುಕ್ರವಾರ ಉದ್ಘಾಟ ನೆಗೊಂಡಿತು. ಯೆನೆಪೊಯ ದಂತ ಕಾಲೇಜಿನ ಸಹ ಭಾಗಿತ್ವದಲ್ಲಿ ನಡೆಯುವ ಶಿಬಿರ ದಲ್ಲಿ ಪಾಲ್ಗೊಳ್ಳುತ್ತಿರುವ ಹಿರಿಯ ನಾಗರಿಕ ರಾದ ಲೂಸಿ ಬೆಳ್ತಂಗಡಿ ಶಿಬಿರಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಶಾಸಕ ಜೆ. ಆರ್.ಲೋಬೊ ಮಾತನಾಡಿ, ದಂತ ಪಂಕ್ತಿಯನ್ನು ನೀಡುವ ಈ ಕಾರ್ಯ ಕ್ರಮವು ಹಿರಿಯ ನಾಗರಿಕರಿಗೆ ತ್ರಾಸವಾಗದ ರೀತಿಯಲ್ಲಿ ಕಡಿಮೆ ಅವಯಲ್ಲಿ ಒದಗಿಸಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ರಾಜ್ಯ ಬಾಯಿ ಆರೋಗ್ಯ ನೀತಿ ಸಮಿತಿಯ ಅಧ್ಯಕ್ಷ ಡಾ.ಗಣೇಶ್ ಶೆಣೈ ಪಂಚಮಾಲ್, ನೋಡಲ್ ಅ ಕಾರಿ ಡಾ.ಲವೀನಾ, ಆರ್ಎಂಒ ಡಾ. ಜೂಲಿಯಾನ ಸಲ್ಡಾನಾ, ಕಾರ್ಯ

ಕ್ರಮ ಅಕಾರಿ ಡಾ.ನವೀನ್ ಉಪಸ್ಥಿತರಿದ್ದರು. ಡಿಎಚ್‌ಒ ಡಾ.ರಾಮಕೃಷ್ಣ ರಾವ್ ಸ್ವಾಗತಿಸಿದರು. ವೆನ್ಲಾಕ್ ಆಸ್ಪತ್ರೆಯ ಶಸಚಿಕಿತ್ಸಕಿ ಡಾ.ರಾಜೇಶ್ವರಿ ದೇವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News