ಕಚೇರಿ ಸಹಾಯಕ, ಜವಾನ ಹುದ್ದೆಗೆ ಅರ್ಜಿ ಆಹ್ವಾನ
Update: 2016-01-10 00:23 IST
ಮಂಗಳೂರು: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ದ.ಕ. ಜಿಲ್ಲೆ, ಮಂಗಳೂರು ಇಲ್ಲಿಗೆ ಲೆಕ್ಕಿಗರು-ಕಂ-ಕಚೇರಿ ಸಹಾಯಕರು ಮತ್ತು ಕಚೇರಿ ಜವಾನ ಹುದ್ದೆಗಳ ನೇಮಕಾತಿಗೆ ಗೌರವಧನದ ಆಧಾರದ ಮೇರೆಗೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಲೆಕ್ಕಿಗರು-ಕಂ-ಕಚೇರಿ ಸಹಾಯಕರು ಹುದ್ದೆಗೆ ಬಿ.ಕಾಂ ಮತ್ತು ಕಚೇರಿ ಜವಾನ ಹುದ್ದೆಗೆ ಎಸೆಸೆಲ್ಸಿ ವಿದ್ಯಾರ್ಹತೆಯುಳ್ಳವರು ಜ.25ರೊಳಗೆ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ದ.ಕ ಜಿಲ್ಲೆ, ಮಂಗಳೂರು ಇವರಿಗೆ ಅರ್ಜಿ ಸಲ್ಲಿಸಬಹುದು.
ಮಾಹಿತಿಗಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ, ಪ್ರಕೃತಿ ಕಮರ್ಷಿಯಲ್ ಕಾಂಪ್ಲೆಕ್ಸ್, 2ನೆ ಮಹಡಿ, ಭಾರತ್ ಬೀಡಿವರ್ಕ್ಸ್ ಪ್ರೈ.ಲಿ. ಎದುರು, ಕದ್ರಿ ರಸ್ತೆ, ಮಂಗಳೂರು-3 ದೂ.ಸಂ: 0824-2433131/ 2433132/ 2435343/ 2437479ನ್ನು ಸಂಪರ್ಕಿಸಬಹುದಾಗಿದೆ.