ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
Update: 2016-01-10 00:23 IST
ಉಡುಪಿ, ಜ.9: ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಮೂರೂರು (ಕಾಲ್ತೋಡು ಗ್ರಾಮ) ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು. 18ರಿಂದ 35 ವರ್ಷ ದೊಳಗಿನ ಕನಿಷ್ಠ 4ನೆ ತರಗತಿ, ಗರಿಷ್ಠ 9ನೆ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಶಿಶು ಅಭಿವೃದ್ಧಿ ಯೋಜನೆ ಕುಂದಾಪುರಕ್ಕೆ ಅರ್ಜಿಗಳನ್ನು ಸಲ್ಲಿಸಲು ಜ.27 ಕೊನೆಯ ದಿನವಾಗಿದೆ. ವಿವರಗಳಿಗೆ ಕುಂದಾಪುರ ಶಿಶು ಅಬಿವೃದ್ಧಿ ಯೋಜನಾಧಿಕಾರಿ ಕಚೇರಿ, ಲೋಕೋಪಯೋಗಿ ಕಚೇರಿ ಹಿಂಭಾಗ, ಕೆಇಬಿ ಕಚೇರಿ ಬಳಿ, ರಾ.ಹೆ.66, ಕುಂದಾಪುರ ಇಲ್ಲಿ ಸಂಪರ್ಕಿಸಬಹುದು ಎಂದು ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟನೆ ತಿಳಿಸಿದೆ.