×
Ad

ಪರ್ಯಾಯಕ್ಕೆ ಬ್ರಾಹ್ಮಣ ಸಮಿತಿಗಳಿಂದ ಹೊರೆಕಾಣಿಕೆ

Update: 2016-01-10 00:23 IST

ಉಡುಪಿ, ಜ.9: ಪೇಜಾವರ ಪರ್ಯಾಯದ ಪ್ರಯುಕ್ತ ಶುಕ್ರವಾರ ಉಡುಪಿ ತಾಲೂಕಿನ ವಿವಿಧ ಬ್ರಾಹ್ಮಣ ಸಮಿತಿಗಳ ವತಿಯಿಂದ ಹೊರೆಕಾಣಿಕೆ ಅರ್ಪಣೆ ನಡೆಯಿತು. ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನಿಂದ ಸುಮಾರು 3 ಲಕ್ಷ ರೂ. ಮೊತ್ತದ ದವಸಧಾನ್ಯ, ತರಕಾರಿ ಇತ್ಯಾದಿಗಳನ್ನು ಅರ್ಪಿಸಿತು. ಪರಿಷತ್ ಅಧ್ಯಕ್ಷ ಶಶಿಧರ ಭಟ್, ಕಾರ್ಯದರ್ಶಿ ಚಂದ್ರಕಾಂತ್ ಭಟ್, ಕೋಶಾಕಾರಿ ಕುಮಾರಸ್ವಾಮಿ ಉಡುಪ, ಮುಖಂಡರಾದ ಭಾಸ್ಕರ್ ರಾವ್ ಕಿದಿಯೂರು, ವಿಜಯ ರಾಘವರಾವ್, ಬಿ.ವಿ.ಲಕ್ಷ್ಮೀನಾರಾಯಣ, ಎಂ.ಎಸ್.ವಿಷ್ಣು, ಮಟ್ಟು ಲಕ್ಷ್ಮೀನಾರಾಯಣ, ಕೆ.ರಂಜನ್‌ಕಲ್ಕೂರ, ಕೆ.ಎಸ್.ಪದ್ಮನಾಭ ಭಟ್ ಮುಂತಾದವರು ಭಾಗವಹಿಸಿದ್ದರು.

ಪೇಜಾವರ ಮಠದ ದಿವಾನ ರಘುರಾಮಾಚಾರ್, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರಾಚಾರ್ಯ ಸೇರಿದಂತೆ ಪದಾಕಾರಿಗಳು ಮೆರವಣಿಗೆಯನ್ನು ಸ್ವಾಗತಿಸಿದರು. ಶ್ರೀವಿಶ್ವಪ್ರಸನ್ನ ತೀರ್ಥರು ಎಲ್ಲರನ್ನು ಅನುಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News