ಜ.12-16: ನಾರಾಯಣ ಗುರು ಕಾಲೇಜಿನ ಬೆಳ್ಳಿಹಬ್ಬ
ಮಂಗಳೂರು, ಜ.9: ಕುದ್ರೋಳಿ ನಾರಾಯಣ ಗುರು ಕಾಲೇಜಿಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಜ.12ರಿಂದ 16ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಬೆಳ್ಳಿಹಬ್ಬ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಆಡಳಿತಾಕಾರಿ ಕೆ. ಬಾಲಕೃಷ್ಣ ಗಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜ.12ರಂದು ಬೆಳಗ್ಗೆ 10ಕ್ಕೆ ‘ಯುವಜನೋತ್ಸವ’ವನ್ನು ಆಯೋಜಿಸಲಾಗಿದೆ. ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಸೀತಪ್ಪ ಕೂಡೂರು ಕಾರ್ಯಕ್ರಮ ಉದ್ಘಾಟಿಸುವರು. ಜ.13ರಂದು ಬೆಳಗ್ಗೆ 9ಕ್ಕೆ ನಡೆಯುವ ಪ.ಪೂ. ಮತ್ತು ವಿವಿ ಮಟ್ಟದ ಅಂತರ್ ಕಾಲೇಜು ವಿಭಾಗದ ಸಾಂಸ್ಕೃತಿಕ ವೈವಿಧ್ಯ ‘ಸ್ಪೆಕ್ಟ್ರಾ- 2016’ ನಡೆಯಲಿದೆ. ಜ.14ರಂದು ಬೆಳಗ್ಗೆ 10ಕ್ಕೆ ನಾರಾಯಣ ಗುರುವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ, ಜ.15ರಂದು ಸಂಜೆ 4ಕ್ಕೆ ರಜತ ಸಂಭ್ರಮವನ್ನು ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸುವರು. ಸಂಜೆ 6ರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಜ.16ರಂದು ಸಂಜೆ 7ಕ್ಕೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಾರಾಯಣ ಗುರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಸಂತ ಕುಮಾರ್, ಉಪನ್ಯಾಸಕ ಕೇಶವ ಬಂಗೇರ, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಉಪಸ್ಥಿತರಿದ್ದರು.