ಸಾಮರಸ್ಯಕ್ಕಾಗಿ ಪರಸ್ಪರ ಸಹಕಾರ: ಶಾಂತಿ ಸೌಹಾರ್ದ ಅದಾಲತ್ ನಿರ್ಣಯ
ಮಂಗಳೂರು, ಜ.9: ಜಿಲ್ಲೆಯಲ್ಲಿ ಶಾಂತಿ ಸೌಹಾರ್ದದ ವಾತಾವರಣ ಕೆಡದಂತೆ, ಪರಸ್ಪರ ಗೌರವದಿಂದ ಬದುಕಲು ಜಾತಿ, ಮತ, ಧರ್ಮ ಭೇದ ಮರೆತು ಪರಸ್ಪರ ಸಹಕಾರ ನೀಡಬೇಕೆಂದು ಶಾಂತಿ ಸೌಹಾರ್ದ ಅದಾಲತ್‌ನಲ್ಲಿ ಸರ್ವಾನು ುತದಿಂದ ನಿರ್ಣಯ ಕೈಗೊಳ್ಳಲಾಯಿತು.
ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿಶ್ವನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ.ಜಿಲ್ಲಾಡಳಿತದ ಸಹಕಾರದೊಂದಿಗೆ ಇಂದು ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಿತು.
ಯಾವುದೇ ಅಹಿತಕರ ಘಟನೆ ನಡೆದ ತಕ್ಷಣ ಘಟನೆಗೆ ಕಾರಣರಾದವರಿಗೆ ಹಿರಿಯರ ಸಹಕಾರದಿಂದ ಸೂಕ್ತ ಮಾರ್ಗದರ್ಶನ ನೀಡಬೇಕು. ತಪ್ಪಿತಸ್ಥರನ್ನು ಪೊಲೀಸರ ಗಮನಕ್ಕೆ ತಂದು ಅವರನ್ನು ಶಿಕ್ಷೆಗೊಳಪಡಿಸಲು ಜಿಲ್ಲಾಡ ಳಿತಕ್ಕೆ ಸಹಕಾರ ನೀಡುವ ನಿರ್ಣಯವನ್ನು ಅದಾಲತ್‌ನಲ್ಲಿ ಕೈಗೊಳ್ಳಲಾಯಿತು.
ಸಮಾಜದ ಹಿರಿಯ ಸ್ಥಾನದಲ್ಲಿರು ವವರು, ಗುರುಗಳ ಸ್ಥಾನದಲ್ಲಿರುವವರು ಮಾರ್ಗದರ್ಶನ ನೀಡಬೇಕಾಗಿದೆ ಎಂದು ನ್ಯಾ.ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.
ಅದಾಲತ್‌ನ ಸಭೆಯಲ್ಲಿ ವಿಎಚ್‌ಪಿ, ಬಜರಂಗ ದಳ ಸೇರಿದಂತೆ ಸಂಘ ಪರಿವಾರದ ಮುಖಂಡರು ಗೋಕಳ್ಳ ಸಾಗಾಟ ನಡೆಯುತ್ತಿದೆ ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ ವಿಫಲ ವಾಗಿದೆ ಎಂದು ಆರೋಪಿಸಿದಾಗ ಕಾಂಗ್ರೆಸ್ ಹಾಗೂ ಸಂಘಪರಿವಾರದ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎಸ್‌ಪಿ.ಶರಣಪ್ಪ ಅದಾಲತ್ ನಡೆಯುತ್ತಿರುವ ಉದ್ದೇಶದ ಬಗ್ಗೆ ಸ್ಪಷ್ಟಪಡಿಸಿದ ಬಳಿಕ ವಾತಾವರಣ ಸ್ವಲ್ಪಮಟ್ಟಿಗೆ ತಿಳಿಯಾಯಿತು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಶಾಸಕ ಜೆ.ಆರ್.ಲೋಬೊ, ಐವನ್ ಡಿಸೋಜ ಮಾತನಾಡಿದರು.
ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಅದಾಲತ್‌ನ ಕಲಾಪ ನಡೆಸಿಕೊಟ್ಟರು. ಕರ್ನಾಟಕ ಪತ್ರಕರ್ತರ ಸಂಘದ ದ.ಕ ಜಿಲ್ಲಾ ಅಧ್ಯಕ್ಷ ಸುದೇಶ್ ಕುಮಾರ್ ಸ್ವಾಗತಿಸಿದರು. ವಿವಿಧ ಪತ್ರಿಕೆ ಗಳ ಪ್ರತಿನಿಧಿಗಳು ಅದಾಲತ್‌ನ ಪ್ರತಿನಿಧಿ ಗಳಾಗಿ ಭಾಗವಹಿಸಿದ್ದರು.
ಇಸ್ಲಾಮ್‌ನ ಮೂಲಗುರಿ ಶಾಂತಿಯ ಪ್ರತಿಪಾದನೆ. ಪ್ರವಾದಿಗಳು ಯಾವುದೇ ಸಂದರ್ಭದಲ್ಲೂ ಶಾಂತಿ ಪ್ರತಿಪಾದನೆಯ ದಾರಿ ತೊರೆದಿಲ್ಲ. ತನ್ನ ಅನುಯಾಯಿಗಳಿಗೂ ‘ಶಾಂತಿಯನ್ನು ಹರಡಿ’ ಎಂದಿದ್ದಾರೆ. ಎಲ್ಲರೂ ಪರಸ್ಪರ ಗೌರವದೊಂದಿಗೆ ಆ ದಾರಿಯಲ್ಲೇ ಸಾಗೋಣ.
-ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್.
ನಾವೆಲ್ಲರೂ ಒಂದೇ ಎನ್ನುವ ಭಾವನೆ ಮನಸಾಕ್ಷಿಯಾಗಿ ನಮ್ಮಿಳಗಿನಿಂದ ಮೂಡಿಬರಬೇಕು.
-ರೆ.ಡಾ.ಆ್ಯಂಡ್ರೋ ರಿಚರ್ಡ್ಸ್, ಕ್ರೈಸ್ತ ಧಾರ್ಮಿಕ ಮುಖಂಡ.
ಆಡಳಿತದಲ್ಲಿ ತಾರತಮ್ಯ ಇಲ್ಲದಿದ್ದಲ್ಲಿ ಸಮಾಜದಲ್ಲಿ ಶಾಂತಿನೆಲೆಸಲು ಸಾಧ್ಯ.
-ಸಂತೋಷ್ ಗುರೂಜಿ.